Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಬೆಂಗಳೂರಿನಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ಮಾಡಿದ ಐವರು ಶಂಕಿತ ಉಗ್ರರ ಬಂಧಿಸಿ CCB ಪೊಲೀಸರು

ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐವರು ಶಂಕಿತರ ಉಗ್ರರನ್ನು ಬಂಧಿಸಿರುವ ಘಟನೆ ನಡೆದಿದೆ.

ಕರ್ನಾಟಕದಲ್ಲಿ ಭಾರೀ ವಿಧ್ವಾಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಐವರು ಶಂಕಿತರ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಸೈಯ್ಯದ್, ಸುಹೇಲ್ ಉಮೇರ್, ಜುನೇದ್, ಮುದಾಸಿನ್, ಜಾಹೀದ್ ಎಂದು ಗುರುತಿಸಲಾಗಿದೆ.

2007 ರ ಅಕ್ಟೋಬರ್ ನಲ್ಲಿ ಮೂವರ ಕಿಡ್ನಾಪ್ ಹಾಗೂ ಓರ್ವನ ಮರ್ಡರ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರು. ಜೈಲಿನಲ್ಲಿರುವಾಗಲೇ ಆರೋಪಿಗಳು ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದರು. ಬಳಿಕ ಕರ್ನಾಟಕದಲ್ಲಿ ಭಾರೀ ಕೃತ್ಯಕ್ಕೆ ಸಂಚು ರೂಪಿಸಿದ್ರು ಎನ್ನಲಾಗಿದ್ದು, ಸದ್ಯ ಐವರು ಶಂಕಿತರ ಭಯೋತ್ಪಾದಕರನ್ನು ಬಂಧಿಸಲಾಗಿದೆ.

Related Articles

Leave a Reply

Your email address will not be published. Required fields are marked *