Jannah Theme License is not validated, Go to the theme options page to validate the license, You need a single license for each domain name.
ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಟಯರ್ ಸ್ಫೋಟ ತಪ್ಪಿದ ಭಾರಿ ಅನಾಹುತ!

ಧಾರವಾಡ

ಕಾರೊಂದು ಅಪಘಾಕ್ಕಿಡಾದ ಪರಿಣಾಮ ಓರ್ವ ಮಹೀಳೆ ಗಾಯಗೊಂಡ ಘಟನೆ ಎಸ್ ಡಿ ಎಂ ಆಸ್ಪತ್ರೆಯ ಎದುರು ನಡೆದಿದೆ .

ಬೆಳಗಾವಿ ಮೂಲದ ಶೋಯೇಬ್ ನಧಾಫ ಎಂಬುವವರಿಗೆ ಸೇರಿದ ಕಾರು ಇದಾಗಿದೆ. ಇದರಲ್ಲಿ ಮಹ್ಮದಲಿ ನದಾಫ್ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದರು. ನವಲಗುಂದದ ಸಂಭಂಧಿಕರ ಗೃಹ ಪ್ರವೇಶ ಮುಗಿಸಿಕೊಂಡು ಧಾರವಾಡದ ಕಡೆ ಪ್ರಯಾಣ ಬೆಳೆಸಿದ್ದರು. ಆದರೆ ಎಸ ಡಿ ಎಂ ಆಸ್ಪತ್ರೆಯ ಎದುರು ಕಾರಿನ ಬಲಗಡೆಯ ಟಯರ್ ಸ್ಫೋಟ ಗೊಂಡ ಕಾರಣ ಬಲಬದಿಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಚಕ್ರ ತುಂಡಾಗಿದೆ. ಅದೃಷ್ಟ ವಶಾತ್ ಯಾವುದೆ ಹೆಚ್ಚಿನ ಪ್ರಾಣ ಹಾನಿಯಾಗದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜೈಬುನ್ ತರ್ಲಘಟ್ಟ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.
ಇದರಿಂದ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಆದರೆ ಇನ್ನೂ ಘಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ಸಂಚಾರಿ ಪೊಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Ford figo KA03 MQ 3446

Related Articles

Leave a Reply

Your email address will not be published. Required fields are marked *