ಹುಬ್ಬಳ್ಳಿ

ಕೊನೆಗೂ ಸರಿಯಾದ BRTS ರಸ್ತೆಯ ಆ ತೆಗ್ಗು

ಹುಬ್ಬಳ್ಳಿ

ಸನಾ ಕಾಲೇಜಿನ BRTS ಬಸ್ ನಿಲ್ದಾಣದ ಬಳಿ ಇರುವ ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಹೋಗುವ ರಸ್ತೆಯಲ್ಲಿ ಅನಾಹುತಕಾರಿ ತಗ್ಗು ಬಿದ್ದಿರುವ ಬಗ್ಗೆ ನಿಮ್ಮ POWER CITY NEWS ವರದಿ ಮಾಡಿತ್ತು.

ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಮುಖಮಾಡಿ ತೆರಳುವ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದ್ರು ಆ ತೆಗ್ಗು ಅವರ ಪ್ರಾಣಕ್ಕೆ ಕಂಟಕ ತಂದೊಡ್ಡುತ್ತಿತ್ತು.

ಕೆಲವು ಸಾರ್ವಜನಿಕರು ಇದರ ಬಗ್ಗೆ POWER CITY NEWS ಗಮನಕ್ಕೆ ತಂದಿದ್ದರು. ಸುದ್ದಿ ಪ್ರಕಟ ಗೊಂಡ ಎರಡೇ ದಿನದಲ್ಲಿ ರಸ್ತೆಯಲ್ಲಿನ “ಆ” ತೆಗ್ಗು ದುರಸ್ತಿಗೊಂಡಿದೆ.

ಇದು ಪವರ್ ಸಿಟಿ ನ್ಯೂಸ್ ಬಿಗ್ ಇಂಫ್ಯಾಕ್ಟ್.

ದಿನ ನಿತ್ಯ ಲಕ್ಷಾಂತರ ವಾಹನ ಸವಾರರ ಪ್ರಮುಖ ರಸ್ತೆ ಇದಾಗಿರುವುದರಿಂದ ರಸ್ತೆಯಲ್ಲಿ ಬಿದ್ದಿದ್ದ ಈ ತೆಗ್ಗು ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಜನ ಪ್ರಶ್ನಿಸುವಂತೆ ಮಾಡಿತ್ತು.

ಇದೀಗ ರಸ್ತೆ ದುರಸ್ತಿಗೊಂಡಿದೆ. ಇದರಿಂದ ವಾಹನ ಸವಾರರಿಗೆ ಅನಕೂಲವಾಗಿದೆ. ಇಂತಹ ಅದೇನೆ ಸಮಸ್ಯೆಗಳು ನೂರಾರು ಇದ್ದರೂ ಕೂಡ ಪವರ್ ಸಿಟಿ‌ ನ್ಯೂಸ್ ನಿಮ್ಮ ಜೊತೆಗಿರುತ್ತೆ.

ನಿಮ್ಮ ಸಮಸ್ಯೆಗಳಿಗೆ ನಮ್ಮ ಸ್ಪಂದನೆ. ಇರಲಿ ನಿಮ್ಮ ಸಹಕಾರ ಹಾಗೂ ಪ್ರೋತ್ಸಾಹ

ರಾಜು ದಕನಿ
ಪವರ್ ಸಿಟಿ‌ ನ್ಯೂಸ್ ಹುಬ್ಬಳ್ಳಿ

Related Articles

Leave a Reply

Your email address will not be published. Required fields are marked *

Back to top button