Jannah Theme License is not validated, Go to the theme options page to validate the license, You need a single license for each domain name.
ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ನಾನೊಬ್ಬ ಹುಟ್ಟು ಹೋರಾಟಗಾರ ಜನ ಸೇವೆಯೇ ನನ್ನ ಬದುಕು: ವಿಜಯ್ ಗುಂಟ್ರಾಳ್!

ಹುಬ್ಬಳ್ಳಿ: ಚುನಾವಣೆಯ ಒತ್ತಡದಿಂದ ಹೊರಬಂದ ದಲಿತ ಮುಖಂಡ ಹಾಗೂ ಎಸ್ ಡಿ ಪಿ ಐ ನ ಪೂರ್ವ ವಿಧಾನ ಸಭಾ ಮತ ಕ್ಷೇತ್ರದ ಅಭ್ಯರ್ಥಿ ಡಾ! ವಿಜಯ್ ಗುಂಟ್ರಾಳ್ ಅವರು ತಂದೆ-ತಾಯಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಒಂದಷ್ಟು ಕಾಲ ಸಮಯ ಕಳೆದರು.

ಶಾಲೆಯ ರಜೆಯ ನಿಮಿತ್ತ ಮನೆಗೆ ಆಗಮಿಸಿರುವ ಮಕ್ಕಳ ಜೊತೆ ಮಕ್ಕಳಂತೆ ಬೆರೆತ ವಿಜಯ್ ಗುಂಟ್ರಾಳ್ ರಾಜಕೀಯ ಹಾಗೂ ಚುನಾವಣೆಯ ವಿಚಾರಗಳನ್ನು ಒಂದಷ್ಟು ಕಾಲ ಮರೆತು ಮಾನಸಿಕ ವಾಗಿ ನೆಮ್ಮದಿಯ ಕ್ಷಣಗಳನ್ನು ತಮ್ಮ ಕುಟುಂಬ ಸದಸ್ಯರೊಂದಗಿ ಕಳೆದರು.

ನಂತರ ಜಾಲಿ ಮೂಡ ನಿಂದ ಹೊರಬಂದು ಎಸ್ ಡಿ ಪಿ ಐ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮುಂದಿನ ರಾಜಕೀಯ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದರ ಜೊತೆಗೆ ಇ ಬಾರಿಯ ಫಲಿತಾಂಶ ಎನೆ ಬರಲಿ ಗೆಲ್ಲುವೆ ಎನ್ನುವ ವಿಶ್ವಾಸ ನನ್ನಲ್ಲೂ ಇದೆ. ಆದರೂ ಮತದಾರ ಪ್ರಭುವಿನ ಜನಾದೇಶವನ್ನು ನಾನು ಗೌರವಿಸುತ್ತೇನೆ. ರಾಜಕೀಯವಾಗಿ ನನ್ನನ್ನ ಹತ್ತಿಕ್ಕಲು ಶತ ಪ್ರಯತ್ನ ನಡೆಯಿತಾದರು ನನ್ನ ಆತ್ಮ ವಿಶ್ವಾಸ ಸದಾ ಹಚ್ಚು ಹಸಿರಾಗಿರುತ್ತೆ ಎಂದು ಚುನಾವಣಾ ಕುರಿತಾದ ಅಭಿಪ್ರಾಯ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *