ಧಾರವಾಡ

ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯ ಆದ್ರೆ ನ್ಯಾಯ‌ ಕೊಡಿಸುವವರು ಯಾರು ಸ್ವಾಮಿ?

ಧಾರವಾಡ

ಮಂಗಳೂರಿನಲ್ಲಿ ವೈದ್ಯಾದಿಕಾರಿ ಕುಚೇಷ್ಟೆ ಸುದ್ದಿಯಾಗಿದ್ದ ಬಳಿಕ ಇದೀಗ ಧಾರವಾಡದಲ್ಲಿಯೂ ಇಂತಹದೊಂದು ವೈದ್ಯಾದಿಕಾರಿ ಪುರಾಣ ಬೆಳಕಿಗೆ ಬಂದಿದೆ.

ಕರ್ನಾಟಕ ರಾಜ್ಯ ಅಂಗನವಾಡಿ ಸಹಾಯಕಿಯರ ಫೇಡರೇಶನ್ ಧಾರವಾಡ ಜಿಲ್ಲಾ ಘಟಕದಿಂದ ಈಗಾಗಲೇ ಜಿಲ್ಲಾಧಿಕಾರಿಗೆ ಹಾಗೂ ಡಿಎಚ್ ಓ ಅವರಿಗೆ ದೂರು ಕೊಡಲಾಗಿದೆ.

ಆದ್ರೆ ವೈದ್ಯಾದಿಕಾರಿ ಬಗ್ಗೆ ಅನ್ಯಾಯ ಆದವರು ಈಗಾಗಲೇ ಡಿಎಚ್ಓ ಅವರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಆಗಿಲ್ಲಾ.

ಅವರು ಬೇರೆ ಯಾರೂ ಅಲ್ಲಾ ಧಾರವಾಡದ ಪಿಎಚ್ ಕ್ಯೂ ವೈದ್ಯಾದಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ವೈದ್ಯನ ಮೇಲೆ ಇದೀಗ ಗಂಭೀರ ಆರೋಪ
ಕೇಳಿಬಂದಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಇವರು ಅಸಭ್ಯವಾಗಿ ಮಾತನಾಡಿಸಿ ಕಿರುಕುಳ ಕೊಡುತ್ತಾರೆ ಎನ್ನುವ ದೂರು ಕೂಡ ಜಿಲ್ಲಾಧಿಕಾರಿಗೆ ಅಂಗಳಕ್ಕೆ ತಲುಪಿದೆ.

ಇತರೆ ಅಂಗನವಾಡಿ ಕಾರ್ಯರ್ತೆಯರ ಜೋತೆಗೆ ಈ ವೈದ್ಯ ಮಹಾಶಯ ಅಸಭ್ಯವಾಗಿ ನಡೆದುಕೊಂಡಿರುವ ಬಗ್ಗೆ ಆರೋಪವೂ ಕೇಳಿ ಬಂದಿದೆ.

ಆದ್ರೆ ಅವರು ಮರ್ಯಾದೆಗೆ ಅಂಜಿ ದೂರು ಕೊಡಲು ಮುಂದೆ ಬರುತ್ತಿಲ್ಲಾ.

ಇಲ್ಲಿ ದೂರು ಕೊಟ್ಟವರು ಮಾತ್ರ ಧೈರ್ಯ ಮಾಡಿ ಮುಂದೆ ಬಂದಿದ್ದಾರೆ.

ಈ ಪ್ರಕರಣವನ್ನು ಡಿಎಚ್ಓ ಯಶವಂತ್ ಮದೀನಕರ ಮುಚ್ಚಿಹಾಕಲು ಯತ್ನ ಮಾಡಿದ್ದಾರೆ ಎನ್ನುವ ಮಾತುಗಳು ಆರೋಗ್ಯ ಇಲಾಖೆಯಲ್ಲಿ ಕೇಳಿ ಬರುತ್ತಿವೆ.

ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಯಾವತ್ತಿಗೂ ಆಗಬಾರದು ಎಂದ್ರೆ ಇದೇ ಪ್ರಕರಣದಿಂದ ಇತ್ರೀಶ್ರಿ ಹಾಡಿ ಅಂಗನವಾಡಿ‌ ಕಾರ್ಯಕರ್ತೆಯರಿಗೆ ನ್ಯಾಯ ಕೊಡಿಸಬೇಕಿದೆ.‌

ನೊಂದವರಿಗೆ ಅನ್ಯಾಯಾವಾದಾಗ ನ್ಯಾಯ ಕೊಡಿಸುವ ಡಿಎಚ್ಓ ಸಾಹೇಬ್ರು ಇಂತಹವರಿಗೆ ನ್ಯಾಯ ಕೊಡಿಸಲು ಆಗದೇ ಇದ್ದರೆ ಏತಕ್ಕೆ ಇರಬೇಕು ಆ ಜಾಗದಲ್ಲಿ ಎನ್ನುವ ಮಾತುಗಳು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಕೇಳಿ ಬರುತ್ತಿವೆ.

ಈ ಆರೋಪಕ್ಕೆ ಗುರಿಯಾಗಿರುವ ವೈದ್ಯರು ಯಾವ ರೀತಿ ಉತ್ತರ ಕೊಡ್ತಾರೆ ಗೊತ್ತಿಲ್ಲಾ.‌ಇದನ್ನು‌ ಜಿಲ್ಲಾಡಳಿತ ತನಿಖೆ ಮಾಡಿದಾಗ ಮಾತ್ರ ತಿಳಿಯುತ್ತೆ.

Related Articles

Leave a Reply

Your email address will not be published. Required fields are marked *

Back to top button