ಧಾರವಾಡ

ಅಭಿವೃದ್ಧಿ ಹಾದಿಯಲ್ಲಿ ಮನಸೂರು ಗ್ರಾಮ ಪಂಚಾಯತ್

Click to Translate

ಧಾರವಾಡ

ಧಾರವಾಡ ತಾಲೂಕಿನ ಮನಸೂರು ಗ್ರಾಮ ಇದೀಗ ಹೆಸರು ಮಾಡುತ್ತಿದೆ.‌

ಕಲಘಟಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಮನಸೂರು ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ ಕುಂಬಾರ್ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ, ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ.

ಮನಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಕರೆಪ್ಪ ಬಾಳಪ್ಪ ಎತ್ತಿನಗುಡ್ಡ ಅವರ ಮಾರ್ಗದರ್ಶನದಲ್ಲಿ ಪಂಚಾಯತ್ ಅಧ್ಯಕ್ಷರಾಗಿರುವ ರಮೇಶ ಸೊಮಪ್ಪ ಕುಂಬಾರ್ ಅವರು ಉಪಾಧ್ಯಕ್ಣರು ಹಾಗೂ ಎಲ್ಲರ ಸದಸ್ಯರರುಗಳು ಸಹಕಾರದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ.

ಸಲಕಿನಕೊಪ್ಪ ಹಾಗೂ ಮನಸೂರು ಗ್ರಾಮದ 11 ಸದಸ್ಯರನ್ನೊಳಗೊಂಡ ಈ ಪಂಚಾಯಿತಿಯಲ್ಲಿ
1) ರಮೇಶ ಸೋಮಪ್ಪ ಕುಂಬಾರ ಅಧ್ಯಕ್ಷರು
2) ಅನಸೂಯಾ ನಾಗಪ್ಪ ಕರ್ಲವಾಡ ಉಪಾಧ್ಯಕ್ಷರು 3) ಮಹಾದೇವಿ ಕೋಟಗುನಶಿಮಠ
4) ದಾನವ್ವ ಬಸಪ್ಪ ಮೇಟಿ 5) ಬಸವರಾಜ ಅಮರಗೊಳ
6) ಕರೆಪ್ಪ ಯತ್ತಿನಗುಡ್ದ
7) ನಿಂಗಪ್ಪ ಯ ತೆಗೂರ
8) ರುದ್ರವ್ವ ಕುರುಬರ
9) ತಿಪ್ಪವ್ವ ಹರಿಜನ
10) ನಿಂಗವ್ವ ಭಾವಿ
11) ರಿಯಾಜ ನಿಪ್ಪಾಣಿ ಇದ್ದಾರೆ.

ಊರಿನಲ್ಲಿ ಕುಡಿಯುವ ನೀರಿನ ಟ್ಯಾಂಕ್ ಗೆ ಇಳಿದು, ಟ್ಯಾಂಕನಲ್ಲಿದ್ದ ಕಸ ತೆಗೆದು, ಶುದ್ದ ಕುಡಿಯುವ ನೀರು ಗ್ರಾಮಸ್ಥರಿಗೆ ಸಿಗಲೆಂದು, ಗ್ರಾಮ ಪಂಚಾಯತ್ ಅಧ್ಯಕ್ಷರಾದರೂ ಕೂಡ, ಜನಸೇವಕನಂತೆ ಕೆಲಸ ಮಾಡುತ್ತಾರೆ ಈ ಅಧ್ಯಕ್ಷರು.

ಮನಸೂರು ಹಾಗೂ ಸಲಕಿನಕೊಪ್ಪ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಮಾಡ್ತಾ ಇದ್ದಾರೆ ಈ ಅಧ್ಯಕ್ಷರು.

ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ‌ಮಾಡುತ್ತೇನೆ. ಎಲ್ಲಾ ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರ ಇದೆ ಅಂತಾರೆ ಮನಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ ಕುಂಬಾರ್.

ಮನಸೂರು ಗ್ರಾಮ ಪಂಚಾಯತ್ ಪಿಡಿಓ ಆಗಿರುವ ಚಿದಾನಂದ ಪತ್ತಾರ ಅವರು ಸರ್ಕಾರಿ ಯೋಜನೆಗಳನ್ನು ಜನಪ್ರತಿನಿಧಿಗಳ ಮೂಲಕ ಊರಿನ ಅಭಿವೃದ್ಧಿಗೆ ಸಹಕಾರ ಕೊಡುತ್ತಿದ್ದಾರೆ.

ಇವರು ಮಾಡುತ್ತಿರುವ ‌ಕೆಲಸಗಳನ್ನು ನೋಡಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button