ಸ್ಥಳೀಯ ಸುದ್ದಿ

ಉತ್ತರ ಕರ್ನಾಟಕದಲ್ಲಿ ಹವಾ ಮಾಡ್ತಾ ಇದೇ ಗಿರ್… ಅಂತೆತಿ ಹುಡುಗಿ ಸಾಂಗ್…

ಧಾರವಾಡ

ಹೌದು ಅಪ್ಪಟ ದೇಸಿ ಹುಡುಗರು ತಯಾರಿಸಿದ ಪಕ್ಕಾ ಜವಾರಿ ಸ್ಟೈಲನ ಆಲ್ಬಂ ಸಾಂಗ್ ಇದು…

ಕುಂದಾನಗರಿ ಬೆಳಗಾವಿ‌ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಪ್ರತಿಭೆ ನಾಗರಾಜ ಜೋರಾಪೂರ ಸಾಹಿತ್ಯ ರಚನೆ ಮಾಡಿರುವ ಹಾಡಿದು.

ಈ ಹಾಡಿಗೆ ದೇವಿಕಾ ಶಿಂದೆ ನೃತ್ಯ ಮಾಡಿದ್ದಾರೆ. ಅದ್ಬುತ ಲೊಕೇಶನಗಳಲ್ಲಿ
ಕ್ಯಾಮೆರಾ ಕೈಚಳಕವನ್ನು ಅಬ್ಬಾಸಲಿ ಅಂಬಲಪಾಡಿ ಅವರು ತೋರಿಸಿದ್ದಾರೆ.

ಹಾಗೇನೆ ಅಷ್ಟೇ ಅಚ್ಚುಕಟ್ಟಾಗಿ
ಎಡಿಟಿಂಗ್ ಋತುರಾಜ
ಅವರು ಮಾಡಿದ್ದಾರೆ. ಈ ಆಲ್ಬಂ ಸಾಂಗಗೆ ಮಹೇಶ ಹಡಪದ ಹಾಗೂ ಗಿಚ್ ಗಿಲಿಗಿಲಿ ಖ್ಯಾತಿಯ ಮುದುಕಣ್ಣ ಮರಬ ಪ್ರೋತ್ಸಾಹಕರಾಗಿದ್ದಾರೆ.

ಪತ್ರಕರ್ತನಾಗಿರುವ ನಾಗರಾಜ ಜೋರಾಪೂರ ಅವರ ಅಭಿನಯಕ್ಕೆ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಈ ಆಲ್ಬಂ ಸಾಂಗ್ ಉತ್ತರ ಕರ್ನಾಟಕ ಅಷ್ಟೇ ಅಲ್ಲದೇ ಕರ್ನಾಟಕದಾದ್ಯಂತ ‌ಹೆಸರು ಮಾಡಲಿ ಎನ್ನುವುದು ನಮ್ಮ ಪವರ್ ಸಿಟಿ ನ್ಯೂಸ್ ಕನ್ನಡದ ಆಶಯ…

Related Articles

Leave a Reply

Your email address will not be published. Required fields are marked *

Back to top button