ಬೆಂಗಳೂರು

ಉಪಚುನಾವಣೆ- ಎಂಎಲ್ಸಿ ಚುನಾವಣೆ ಗೆಲುವಿನ ಹಿಂದೆ ಇದೆ ಆ ಲೀಡರ್ ಶ್ರಮ

ಧಾರವಾಡ

ಗದಗ, ಹಾವೇರಿ, ಧಾರವಾಡ ಜಿಲ್ಲೆಯ ವ್ಯಾಪ್ತಿಯ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಗೆಲುವು ಸಾಧಿಸಿದ್ದಾರೆ.‌

3334 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಸಲೀಮ್ ಅಹ್ಮದ ಅವರು ಗೆಲುವು ಸಾಧಿಸಿದ್ದಾರೆ.

ಅಹ್ಮ ಬ್ರಹ್ಮಾಸ್ಮಿ ಎನ್ನುವ ಮೋದಿ ಅವರಿಗೆ ಜನರು‌ ಪಾಠ ಕಲಿಸುತ್ತಿದ್ದಾರೆ. 2023 ರ ಚುನಾವಣೆಯಲ್ಲಿ ಕಾಂಗ್ರೆಸ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ನನ್ನ ಗೆಲುವಿಗೆ ಶ್ರಮಿಸಿದ ಎಲ್ಲಾ ನಾಯಕರುಗಳಿಗೂ ಅಭಿನಂದನೆಗಳು.‌ನನ್ನ ಗೆಲುವು ಕಾರ್ಯಕರ್ತರ ಗೆಲುವು ಎಂದು ಸಲೀಂ ಅಹ್ಮದ ಹೇಳಿದ್ರು.

ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ 2497 ಮತಗಳನ್ನು ಪಡೆದು 2 ನೇ ಸ್ಥಾನಕ್ಕೆ ಸಮಾಧಾನ ಪಡುವಂತೆ ಆಗಿದೆ.

ಇನ್ನು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಹಾವೇರಿ 1217 ಮತಗಳನ್ನು ಪಡೆದು‌ 3 ನೇ ಸ್ಥಾನ ಗಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಒಟ್ಟು 7450 ಮತಗಳಲ್ಲಿ 7080 ಮತಗಳು ಸಿಂಧುವಾಗಿದ್ದು, 370 ಮತಗಳು ಅಸಿಂಧುವಾಗಿವೆ.‌

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾಜಿ ಸಚಿವರಾಗಿದ್ದ ವಿನಯ ಕುಲಕರ್ಣಿ ಅವರು ಜಿಲ್ಲೆಯ ಹೊರಗಿನಿಂದ‌ ಸಭೆ ಸಮಾರಂಭಗಳನ್ನು ಮಾಡಿ ಸಲೀಂ ಅಹ್ಮದ ಅವರ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದಾರೆ.

ವಿನಯ‌ ಕುಲಕರ್ಣಿ ಅವರ ಮಾರ್ಗದರ್ಶನದಂತೆ ವಿನಯ್ ಅವರ ಮನೆಗೂ ಭೇಟಿ ನೀಡಿದ್ದ ಸಲೀಂ ಅಹ್ಮದ ಕಾಂಗ್ರೆಸ್ ಮುಖಂಡರ ಜೋತೆಗೆ ಚುನಾವಣೆ ರಣತಂತ್ರ ಹೆಣೆದಿದ್ದರು.

ಸವದತ್ತಿ ಚುನಾವಣೆ ಪ್ರಚಾರದಲ್ಲಿ ಸಹಿತ ವಿನಯ ಕುಲಕರ್ಣಿ ಅವರು ಧಾರವಾಡ 71 ನೇ ಮತಕ್ಷೇತ್ರದ ಜನಪ್ರತಿನಿಧಿಗಳಿಗೆ ಸಮಾವೇಶ ಮಾಡುವ ಮೂಲಕ ಕಾಂಗ್ರೆಸ ಗೆಲುವಿಗೆ ಶ್ರಮಿಸಿದ್ದರು.

ಎಂಎಲ್ ಸಿ ಚುನಾವಣೆಯ ಮತದಾನದ ದಿನವೂ ಕೂಡ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ, ಮತದಾನ ಮಾಡದೇ ಇದ್ದಂತಹ ಜನಪ್ರತಿನಿಧಿಗಳಿಗೆ ಮತದಾನ ಮಾಡಲು ಮನವಿ ಮಾಡಿದ್ದರು ವಿನಯ ಕುಲಕರ್ಣಿ ಅವರು.

ಗ್ರಾಮೀಣ ಭಾಗದಲ್ಲಿ 384 ಪಂಚಾಯತನ ಚುನಾಯಿತ ಪ್ರತಿನಿಧಿಗಳು ಹಾಗೂ 4 ಮಂದಿ ಪಾಲಿಕೆ ಪ್ರತಿನಿಧಿಗಳು ಇದ್ದು, ಇದರಲ್ಲಿ ಇಬ್ಬರು ಪಂಚಾಯತ್ ಪ್ರತಿನಿಧಿ ಸಾವನ್ನಪ್ಪಿದು, 387 ಮಂದಿ ಮೊದಲ ಪ್ರಾಶಸ್ತ್ಯದಲ್ಲಿ ಮತದಾನ ಮಾಡಲು ವಿನಯ ಕುಲಕರ್ಣಿ ಅವರು ಮನಮುಟ್ಟುವಂತೆ ಪ್ರೇರೇಪಣೆ ಮಾಡಿದ್ದರು.

ಇತ್ತೀಚಿಗೆ ರಾಜ್ಯದಲ್ಲಿ ನಡೆದ ಹಾನಗಲ್ ಉಪಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಅವರ ಗೆಲುವಿಗೆ ವಿನಯ ಕುಲಕರ್ಣಿ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸಿ, ಮಾನೆ ಗೆಲುವಿನ ಹಿಂದೆಯೂ ಕೂಡ ಶ್ರಮಪಟ್ಟಿದ್ದರು.

ಇಂತಹ ನಾಯಕ ಜಿಲ್ಲೆಯಿಂದ ಹೊರಗಡೆ ಇದ್ದರೂ ಸಹಿತ, ನೋ ಡೌಟ್ ತಾನೊಬ್ಬ ಮಾಸ ಲೀಡರ್ ಎನ್ನುವುದನ್ನು ಈ 2 ಗೆಲುವುಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಂದು ಕೊಡುವುದರ ಮೂಲಕ ಸಾಬೀತು ಮಾಡಿದ್ದಾರೆ ವಿನಯ ಕುಲಕರ್ಣಿ ಅವರು…

Related Articles

Leave a Reply

Your email address will not be published. Required fields are marked *

Back to top button