ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅತಿಥಿ ಉಪನ್ಯಾಸಕರಾಗಿದ್ದ ಶ್ರೀ ಹರ್ಷ ಶ್ಯಾನಬೋಗ ಅವರು ಸುಮಾರು 13 ವರ್ಷದಿಂದ ಉಪನ್ಯಾಸ ಮಾಡುತ್ತಿದ್ದರು. ತಿಂಗಳಿಗೆ 11000 ರೂಪಾಯಿ ವೇತನದಂತೆ ಕೆಲಸ ಮಾಡತ್ತಿದ್ದರು.
ಆಗೋಮ್ಮೆ ಈಗೊಮ್ಮೇ ಬರತಕ್ಕ ಕಡಿಮೆ ಸಂಬಳದಲ್ಲಿ ಕುಟುಂಬ ನಿರ್ವಹಣೆ ಕಷ್ಟವೆಂದು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಿಗೆ ಪತ್ನಿ, ಇಬ್ಬರು ಮಕ್ಕಳು ಹಾಗೂ ತಂದೆ- ತಾಯಿ ಇದ್ದು ಮನೆಯ ಹಿರಿಯ ಯಜಮಾನನ್ನು ಕಳೆದುಕೊಂಡ ಕುಟುಂಬ ಇದೀಗ ಬೀದಿಗೆ ಬಿದ್ದಂತಾಗಿದೆ.
ಈಗಲಾದ್ರೂ ಸರ್ಕಾರ ಎಚ್ಚೇತ್ತುಕೊಂಡು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕಿದೆ.