ಧಾರವಾಡ

ಕರವೇ ರೈತ ಘಟಕದಿಂದ ಪತ್ರ ಚಳವಳಿ..

ಧಾರವಾಡ

ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಲಾಗಿದೆ.
ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಸವರಿ ಅವಮಾನಿಸಲಾಗಿದೆ.
ಈ ರೀತಿ ಅಮಾನುಷ ಕೃತ್ಯಗಳನ್ನು ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆಯನ್ನು ಕರ್ನಾಟಕ ರಾಜ್ಯದಲ್ಲಿ ಶಾಶ್ವತವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕದ ಪದಾಧಿಕಾರಿಗಳಿಂದ ಪತ್ರ ಚಳವಳಿ ನಡೆಸಲಾಯಿತು.

ಹೆಡ್ ಪೋಸ್ಟ್ ಮುಂದೆ ಪತ್ರ ಚಳುವಳಿ

ಸನ್ಮಾನ್ಯ ರಾಜ್ಯಪಾಲರ ಗಮನಕ್ಕೆ ತರುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆಯ ರೈತ ಘಟಕದ ಜಿಲ್ಲಾಧ್ಯಕ್ಷರಾದ ಪಾಪು ಧಾರೆ ಇವರ ಮುಖಂಡತ್ವದಲ್ಲಿ ಮಾಡಲಾಯಿತು.

ಪಾಪು ಧಾರೆ (ಕರವೇ ರೈತ ಘಟಕದ ಜಿಲ್ಲಾಧ್ಯಕ್ಷ -ಧಾರವಾಡ)

ನಗರದ ಮುಖ್ಯ ಅಂಚೆ ಕಚೇರಿ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಕರವೇ ರೈತ ಘಟಕದ ಪದಾಧಿಕಾರಿಗಳು ನಾಡ ದ್ರೋಹಿ ಸಂಘಟನೆಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು..
ಈ ಸಂದರ್ಭದಲ್ಲಿ ಮಾತನಾಡಿದ ಪಾಪು ಧಾರೆ ಕೇವಲ ಕರ್ನಾಟಕ ಬಂದ್ ಕರೆ ನೀಡುವ ಮೂಲಕ, ಹಾಗೂ ಬಿದಿಗಿಳಿದು ಹೋರಾಟ ಮಾಡುವದರ ಮೂಲಕ ಈ ಸಂಘಟನೆಗಳನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧಿಸಲು ಸಾಧ್ಯವಿಲ್ಲ.

ಕಾನೂನಾತ್ಮಕ ಹೋರಾಟ ಮಾಡುವುದರ ಮೂಲಕ ಮಾತ್ರ ಈ ಎರಡು ಸಂಘಟನೆಗಳನ್ನು ನಿಷೇಧಿಸಬಹುದು ಹಾಗೂ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಚಿವರು ಮತ್ತು ಶಾಸಕರುಗಳು ಸಮ್ಮತಿಸಿ ಒಗ್ಗಟ್ಟಿನಿಂದ ನಿಷೇಧ ವಿಷಯವನ್ನು ಪ್ರಸ್ತಾವನೆ ಮಾಡಿದಾಗ ನಾವು ಈ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧ ಮಾಡುವುದರಲ್ಲಿ ಯಶಸ್ಸು ಕಾಣಬಹುದು.

ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಸನ್ಮಾನ್ಯ ಘನವೆತ್ತ ರಾಜ್ಯಪಾಲರಿಗೆ ಪತ್ರ ಬರೆದು ಪತ್ರ ಚಳುವಳಿಯ ಆರಂಭಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ರೈತ ಘಟಕದ ಜಿಲ್ಲಾಧ್ಯಕ್ಷ ಪಾಪು ಧಾರೆ,ಓಂಕಾರ್ ಪವಾರ. ಧನಂಜಯ್, ರೋನಿತ್ ಧಾರೆ,ನಾಗರಾಜ್ ಶಿಲಾರೆ, ರಾಜು,ಕಲ್ಮೇಶ, ಪ್ರಫುಲ್, ಸಂತೋಷ್ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button