ಧಾರವಾಡ

ಕರ್ನಾಟಕ ಬಂದಗೆ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕದಿಂದ ವಿಭಿನ್ನ ಹೋರಾಟ

ಧಾರವಾಡ

ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನಾ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ 31 ರಂದು ಕನ್ನಡ ಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದಗೆ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕದಿಂದ ಬೆಂಬಲ ನೀಡದೇ

.


ಡಿಸೆಂಬರ್ 31 ರಂದು ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕದಿಂದ ಪತ್ರ ಚಳವಳಿ ಮೂಲಕ ಸನ್ಮಾನ್ಯ ರಾಜ್ಯಪಾಲರ ಗಮನಕ್ಕೆ ಎಂಇಎಸ್, ಹಾಗೂ ಶಿವಸೇನಾ ಸಂಘಟನೆ ನಿಷೇಧ, ವಿಷಯ ತರುವ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.

  ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ದ್ವೇಷ ಹುಟ್ಟುಹಾಕುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನಾ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಬಂದ್ ಕರೆ ನ್ಯಾಯ ಸಮ್ಮತವಲ್ಲ.

ಬಂದ್ ಕರೆ ನೀಡುವುದು ಯಾವುದೇ ಹೋರಾಟದ ಕೊನೆಯ ಅಸ್ತ್ರ ವಾಗಿರಬೇಕು ಇದನ್ನು ಬಿಟ್ಟು ಪದೇಪದೇ ಕರ್ನಾಟಕ ಬಂದ್ ಕರೆ ನೀಡುವುದು ಹೋರಾಟದ ಒಳ್ಳೆಯ ಬೆಳವಣಿಗೆ ಅಲ್ಲ.
ಕೆಲ ಸಂಘಟನೆಗಳು ಪ್ರಚಾರಪ್ರಿಯತೆ ಗಾಗಿ ಅತಿಸರಳ ವಿಧಾನವಾದ ಕರ್ನಾಟಕ ಬಂದ್ ಕರೆ ಮಾಡುವುದು ಕರ ಗತ ಮಾಡಿಕೊಂಡಿದ್ದಾರೆ.
ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ರೈತರ ಖಂಡಿಸುತ್ತದೆ
.
ಕರೋನ ಸಾಂಕ್ರಾಮಿಕ ರೋಗ ಹಾಗೂ ಇದರ ಪರಿಣಾಮ ಮಾಡಲಾಗಿದ್ದ ಲಾಕ್ಡೌನ್ ಗಳಿಂದ ಈಗಾಗಲೇ ಕನ್ನಡ ನಾಡಿನ ಜನತೆ ಸಾಕಷ್ಟು ಆರ್ಥಿಕ ಸಂಕಷ್ಟಗಳಿಗೆ ತುತ್ತಾಗಿದ್ದು, ಸಾಕಷ್ಟು ಉದ್ಯಮಗಳು ನಷ್ಟಗಳನ್ನು ಅನುಭವಿಸಿ ರುತ್ತವೆ.
ಸಾಕಷ್ಟು ಜನ ದಿನಗೂಲಿ ನೌಕರರು ಹಾಗೂ ಕೂಲಿ ಕಾರ್ಮಿಕರು ತಮ್ಮ ಬದುಕುಗಳನ್ನು ಕಳೆದುಕೊಂಡಿದ್ದು ಈಗಷ್ಟೇ ಜನರ ಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ಬಂದ್ ಕರೆ ಅವಶ್ಯಕತೆ ಇದೆಯಾ? ಎನ್ನುವುದರ ಆತ್ಮಾವಲೋಕನ ಬಂದ ಕರೆ ನೀಡಿರುವ ಕನ್ನಡಪರ ಸಂಘಟನೆಗಳು ಮಾಡಿಕೊಳ್ಳಬೇಕಾಗಿದೆ.

ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಲಾಗಿದೆ. ಅದೇ ರೀತಿ ರಾಷ್ಟ್ರ ನಾಯಕ ಶಿವಾಜಿ ಮೂರ್ತಿಗೂ ಮಸಿ ಎರಚಲಾಗಿದೆ,ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಸವರಿ ಅವಮಾನಿಸಲಾಗಿದೆ.
ಈ ರೀತಿ ಅಮಾನುಷ ಕೃತ್ಯಗಳನ್ನು ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆಯನ್ನು ಕರ್ನಾಟಕ ರಾಜ್ಯದಲ್ಲಿ ಶಾಶ್ವತವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಡಿಸೆಂಬರ್ 31 ರಂದು ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಪತ್ರ ಚಳವಳಿ ಮೂಲಕ ಸನ್ಮಾನ್ಯ ರಾಜ್ಯಪಾಲರ ಗಮನಕ್ಕೆ ತರುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆಯ ರೈತ ಘಟಕದ ಜಿಲ್ಲಾಧ್ಯಕ್ಷರಾದ ಪಾಪು ಧಾರೆ ಇವರ ಮುಖಂಡತ್ವದಲ್ಲಿ ಮಾಡಲಾಗುವುದು.

ಧನ್ಯವಾದಗಳು..

ಪಾಪು ಧಾರೆ
ಜಿಲ್ಲಾಧ್ಯಕ್ಷರು
ಕರವೇ ರೈತ ಘಟಕ
ಧಾರವಾಡ..

Related Articles

Leave a Reply

Your email address will not be published. Required fields are marked *

Back to top button