ಧಾರವಾಡ

ಕಾಂಗ್ರೆಸ್ ಬಲವರ್ಧನೆ 3 ದಿನಗಳ ಮಹತ್ವದ ಶಿಬಿರ – ಧಾರವಾಡದ ಹಿರಿಯ ಮುಖಂಡ ಪಿ.ಎಚ್.ನೀರಲಕೇರಿ ಭಾಗಿ

ಧಾರವಾಡ

ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮಹತ್ವದ ಕಾರ್ಯಾಗಾರ‌ ಹೊರ ರಾಜ್ಯ ಮಹಾರಾಷ್ಟದಲ್ಲಿ ನಡೆಯುತ್ತಿದೆ.

ಮಹಾರಾಷ್ಟ್ರ ರಾಜ್ಯದ ಸೇವಾಗ್ರಾಮ ಆಶ್ರಮದ ವಾರ್ಧಾದಲ್ಲಿ 3 ದಿನಗಳ ವರ್ಕಶಾಪ್ ನಡೆಯುತ್ತಿದೆ. ಈ ವರ್ಕಶಾಪನಲ್ಲಿ ರಾಜ್ಯದ 5 ಮಂದಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವಕಾಶ ಕಲ್ಪಿಸಿ ಪತ್ರ ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ವರ್ಕಾಶಾಪಗೆ ಹೋಗುವ ಮುಖಂಡರು ಈಗಾಗಲೇ ಮಹಾರಾಷ್ಟ್ರದ ವಾರ್ಧಾಕ್ಕೆ ತೆರಳಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರು ಹಾಗೂ ವಕೀಲರಾಗಿ ಕಾನೂನಿನ ಅನುಭವವನ್ನು ಹೊಂದಿರುವ ಪಿ.ಎಚ್.ನೀರಲಕೇರಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button