ಕೈಹಿಡಿದ ಪತಿಗೆ ಕೊಡಲಿಏಟು ಕೊಟ್ಟು ಕೊಂದ ಪಾಪಿ ಪತ್ನಿ
ಧಾರವಾಡ
ಪತಿ ಪರಮೇಶ್ವರ ಅಂತಾರೆ. ಆದ್ರೆ ಇಲ್ಲೊಬ್ಬ ಪತಿರಾಯನ ಸತಿ, ಪತಿಯನ್ನು ಬಾರದ ಲೋಕಕ್ಕೆ ಕಳಿಸಿದ್ದಾಳೆ. ಈಕೆಗೆ ಆಕೆಯ ಪ್ರೀಯಕರ ಸಾಥ್ ಕೊಟ್ಟಿದ್ದಾನೆ.
ಇಂತಹದೊಂದು ಘಟನೆ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ.
ಸುಮಾರು 3 ವರ್ಷದ ಹಿಂದೆ ಮುಳಮುತ್ತಲ ಗ್ರಾಮದ ಭಿಮ್ಮಪ್ಪ ಕರೆಸಿದ್ದಪ್ಪನವರ್( 32) ಈತನ ಜೋತೆಗೆ ವಿವಾಹವಾಗಿದ್ದ ಕಾವೇರಿಗೆ 2 ಮಕ್ಕಳು ಇದಾವೆ.
ಆದ್ರೆ ಕಾವೇರಿಗೆ ಪಕ್ಕದ ಮನೆಯ ಶಿವಾಜಿ ಎನ್ನುವ 22 ವರ್ಷದ ಯುವಕನೊಂದಿಗೆ ಪ್ರೀತಿ ಹುಟ್ಟಿತ್ತು.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪತಿರಾಯ ಭೀಮಪ್ಪ ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದ.
ಹೆಂಡತಿಯ ಅನೈತಿಕ ಸಂಬಂಧ ಈತನಿಗೆ ಗೊತ್ತಾಗಿದ್ದಕ್ಕೆ ಹಲವಾರು ಬಾರಿ ಬುದ್ದಿಯನ್ನು ಹೇಳಿದ್ದ.
ಆದ್ರೆ ಹೆಂಡತಿ ಕಾವೇರಿಯ ಪಕ್ಕದ ಮನೆವನ ಜೋತೆಗೆ ಅನೈತಿಕ ಸಂಬಂಧ ಮುಂದುವರೆದಿತ್ತು.
ಇಂದು ಡಿಸೆಂಬರ್ 14 ರಂದು ನಸುಕಿನ ಜಾವ 1 ಗಂಟೆ ಸುಮಾರಿಗೆ ಹೆಂಡತಿ ಗಂಡನಿಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಇದಕ್ಕೆ ಪ್ರೀಯಕರ ಶಿವಾಜಿ ಕೂಡ ಸಾತ್ ಕೊಟ್ಟಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ತಾಯಿ ಮಾಡಿದ ತಪ್ಪಿನಿಂದ ತಂದೆಯನ್ನು ಕಳೆದುಕೊಂಡ ಮಕ್ಕಳಿಗೆ ಇತ್ತ ತಾಯಿಯನ್ನು, ಇನ್ನು ಮುಂದೆ ಜೈಲಿನಲ್ಲಿ ಕಾಣುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸವೇ ಸರಿ.