ಧಾರವಾಡರಾಜ್ಯಸ್ಥಳೀಯ ಸುದ್ದಿ

ಗ್ರಾಮಪಂಚಾಯ್ತಿ ಉಪಾಧ್ಯಕ್ಷನ ಬರ್ಬರ ಕೊಲೆ:ನಾಲ್ವರ ಬಂಧನ!

ಧಾರವಾಡ* : ಎರಡು ಗುಂಪಿನ ನಡುವಿನ ಜಗಳವನ್ನ ಬಿಡಿಸಿ ಕಳುಹಿಸಿದ ವ್ಯಕ್ತಿಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಪ್ರವೀಣ್​ ಕಮ್ಮಾರ(36) ಮೃತ ವ್ಯಕ್ತಿ. ಗ್ರಾಮ‌ ಪಂಚಾಯತ್ ಉಪಾಧ್ಯಕ್ಷ ಆಗಿರುವ ಪ್ರವೀಣ್​, ಗ್ರಾಮದಲ್ಲಿ ನಡೆದಿದ್ದ ಉಡಚಮ್ಮ ದೇವಿ ಜಾತ್ರೆಯ ಪ್ರಸಾದದ ವೇಳೆ ಕೆಲವರು ಕುಡಿದು ಜಗಳವಾಡಿಕೊಳ್ಳಲು ಶುರು ಮಾಡಿದ್ದಾರೆ.

ಪ್ರವೀಣ ಕಮ್ಮಾರ!

ಈ ವೇಳೆ ಪ್ರವೀಣ್ ಜಗಳ ಬಿಡಿಸಿ ಕಳುಹಿಸಿದ್ದ. ​
ಆದರೆ ಜಗಳ ಮಾಡಿದ್ದ ಒಂದು ಗುಂಪಿನ ಕಡೆಯವರು ಪುನಃ ಜಗಳವಾಡಲು ಬಂದಿದ್ದಾರೆ. ಈ ವೇಳೆ ಪ್ರವೀಣ್​ಗೆ ಚಾಕು ಇರಿದಿದ್ದಾರೆ. ಇನ್ನು ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್​ರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ಇಂದು(ಏ.19) ಬೆಳಗಿನ ಜಾವ ಚಿಕಿತ್ಸೆ ಫಲಿಸದೇ ಪ್ರವೀಣ್ ಸಾವನ್ನಪ್ಪಿದ್ದಾನೆ. ಚಾಕು ಇರಿದಿದ್ದ ರಾಘವೇಂದ್ರ ಪಟಾತ್ ಸೇರಿದಂತೆ ನಾಲ್ಕು ಜನರನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button