ಸ್ಥಳೀಯ ಸುದ್ದಿ

ಗ್ರಾಮ ಪಂಚಾಯಿತಿ‌ ನೌಕರನ ಮಗಳಿಗೆ 9 ಚಿನ್ನದ ಪದಕ

ಧಾರವಾಡ

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ ಮತ್ತು ಮಹಾದೇವಿ ಅವರ ಮಗಳಾದ ಸುಜಾತ ಜೋಡಳ್ಳಿ ಅವರು ಎಂ.ಎ ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, ಒಂಬತ್ತು ಚಿನ್ನದ ಪದಕಗಳನ್ನು ಪಡೆದು ಚಿನ್ನದ ಹುಡುಗಿ ಎನಿಸಿಕೊಂಡಿದ್ದಾಳೆ.

ಕವಿವಿ 72 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕುಮಾರ ಮಹಾದೇವ ಸ್ವರ್ಣ ಪದಕ, ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ ಸ್ವರ್ಣ ಪದಕ, ಕೆ. ಎಂ. ರಾಜಶೇಖರಪ್ಪ ಹಿರೇಮಠ ಸ್ವರ್ಣ ಪದಕ, ಮೋಹರೆ ಹನುಮಂತರಾಯ್ ಸ್ವರ್ಣ ಪದಕ, ಕೆ. ಶಾಮರಾವ ಸ್ವರ್ಣ ಪದಕ, ಲಕ್ಷ್ಮಣ ಶ್ರೀಪಾದ ಭಟ್ ಜೋಶಿ ಸ್ಮಾರಕ ಸ್ವರ್ಣ ಪದಕ, ಎಸ್. ವೀರೇಶ್ ನೀಲಕಂಠ ಶಾಸ್ತ್ರಿ ಸಂಗನಹಾಲ ಸ್ವರ್ಣ ಪದಕ, ಆರ್. ಎಸ್. ಚಕ್ರವರ್ತಿ ಸ್ವರ್ಣ ಪದಕ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸ್ವರ್ಣ ಪದಕ ಸೇರಿದಂತೆ ಇಂದುಮತಿ ಡಾ. ಪಾಟೀಲ ಪುಟ್ಟಪ್ಪ ,ಡೆಕ್ಕನ್ ಹೆರಾಲ್ಡ್/ಪ್ರಜಾವಾಣಿ ನಗದು ಪುರಸ್ಕಾರ ಪಡೆದ ಇವರು ಪ್ರಸ್ತುತ ಕಾರಾವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಟಿಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಂದೆ, ತಾಯಿ ಹಾಗೂ ನನ್ನ ಸ್ನೇಹಿತೆ ವಿದ್ಯಾಳ ಸಹಾಯ, ಸಹಕಾರದಿಂದ ಈ ಗೆಲುವು ಸಾಧ್ಯವಾಯಿತು. ಮಾಧ್ಯಮದಲ್ಲಿಯೇ ವೃತ್ತಿ ಆರಂಭಿಸುವುದು ನನ್ನ ಆಶಯವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button