ಧಾರವಾಡ

*ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿ* *ಜಿ.ಪಂ.CEO ಡಾ.ಬಿ.ಸುಶೀಲಾ*

ಧಾರವಾಡ

ಕರ್ನಾಟಕ ವಿಧಾನ ಪರಿಷತ್ತಿನ ಧಾರವಾಡ  ಸ್ಥಳೀಯ ಸಂಸ್ಥೆಯ ಕ್ಷೇತ್ರದ ಚುನಾವಣೆಗಾಗಿ ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ  ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ.ತಾಲೂಕುವಾರು ಮಾದರಿ ನೀತಿ ಸಂಹಿತೆ ತಂಡಗಳು ತೀವ್ರ ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಎಂ.ಸಿ.ಸಿ.ನೋಡಲ್ ಅಧಿಕಾರಿಗಳೂ ಆಗಿರುವ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಹೇಳಿದರು

.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ(ನ.12) ಸಂಜೆ ನಡೆದ ಮಾದರಿ ನೀತಿ ಸಂಹಿತೆ ಜಾರಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂಡಗಳು ಕಾರ್ಯಚಟುವಟಿಕೆಗಳ ತಮ್ಮ ದೈನಂದಿನ ವರದಿಯನ್ನು  ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು .  ಧಾರ್ಮಿಕ ಸಂಸ್ಥೆಗಳನ್ನು ಯಾವುದೇ ತರಹದ ರಾಜಕೀಯ ಕಾರ್ಯಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಬಾರದು , ಒಂದೇ  ವಸ್ತುವನ್ನು ಬೃಹತ್ ಪ್ರಮಾಣದಲ್ಲಿ ಮಾರಾಟವಾಗುವದನ್ನು ಗಮನಿಸಿ,ತಡೆಯಬೇಕು. ಯಾವುದೇ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮನೆ ,ಕಛೇರಿಗಳಲ್ಲಿ ಬೃಹತ್ ಪ್ರಮಾಣದಲ್ಲಿ ನಗದು ಅಥವಾ ಚಿನ್ನಾಭರಣ ಕಂಡು ಬಂದರೆ ಫ್ಲೈಯಿಂಗ್ ಸ್ಕ್ವಾಡ್ ತಂಡ ಮತ್ತು ಆದಾಯ ತೆರಿಗೆ ಇಲಾಖೆಯವರಿಗೆ ಮಾಹಿತಿ ನೀಡಬೇಕು.

ಯಾವುದೇ ವ್ಯಕ್ತಿಯ ಖಾತೆಯಲ್ಲಿ ಅನುಮಾನಾಸ್ಪದ ವ್ಯವಹಾರಗಳು ಕಂಡು ಬಂದರೆ ಎಲ್ಲಾ ಬ್ಯಾಂಕುಗಳಿಂದ ವರದಿಗಳನ್ನು ಪಡೆದುಕೊಳ್ಳಲಾಗುವುದು.
ಜಿಲ್ಲಾ ಪಂಚಾಯತ , ತಾಲೂಕು ಪಂಚಾಯತ , ಗ್ರಾಮ ಪಂಚಾಯತ ಮತ್ತು ಇತರೆ ನಗರ  ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು ಮತದಾನದ ಹಕ್ಕನ್ನು ಹೊಂದಿರುತ್ತಾರೆ . ನೀತಿ ಸಂಹಿತೆ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಕಾರ್ಯಕ್ರಮದಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸಬೇಕಾದ ಅಗತ್ಯವಿದ್ದರೆ ಸಂಬಂಧಪಟ್ಟ ಮೇಲಾಧಿಕಾರಿಗಳ ಅನುಮತಿಯನ್ನು ಪಡೆದುಕೊಂಡು ಭಾಗವಹಿಸಬೇಕು.ಕಾರ್ಯಕ್ರಮದಲ್ಲಿ ಯಾವುದೇ ತರಹದ ಭಾಷಣ ಮಾಡಬಾರದು. ಕಾರ್ಯಕ್ರಮದ ವಿಡಿಯೋ ರೆಕಾರ್ಡಿಂಗ್ ಮಾಡಿ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು . ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಯೋಜನೆ ಅಡಿಯಲ್ಲಿ ಈಗಾಗಲೇ ನಡೆಯುತ್ತಿರುವ ಕೆಲಸ ಕಾರ್ಯಗಳಿಗೆ ಯಾವುದೇ ತರಹದ ತೊಂದರೆಗಳು ಇರುವುದಿಲ್ಲ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿ,
ನೀತಿ ಸಂಹಿತೆಯ ಮಾರ್ಗಸೂಚಿಗಳನ್ನು ಭಾರತ ಚುನಾವಣಾ ಆಯೋಗದ ಪೋರ್ಟಲ್‌ನಲ್ಲಿ  ಪಡೆದುಕೊಳ್ಳಬಹುದು. ನೀತಿ ಸಂಹಿತೆಯು ಜಾರಿಯಲ್ಲಿರುವ ಸಂದರ್ಭದಲ್ಲಿ  ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗಬಾರದು,  ಹೆದ್ದಾರಿ ಫಲಕಗಳು,ಪೋಸ್ಟರುಗಳಲ್ಲಿರುವ ರಾಜಕೀಯ ಪ್ರತಿನಿಧಿಗಳ ಫೋಟೋಗಳನ್ನು ತೆಗೆದು ಹಾಕಬೇಕು ಅಥವಾ ಬಟ್ಟೆಯಿಂದ ಮುಚ್ಚಬೇಕು ,
ಪ್ರಸಕ್ತ ಕಾರ್ಯಾಚರಣೆಯಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ , ಹೊಸ ಕಾಮಗಾರಿಗಳ ಕೆಲಸದ ಆದೇಶಗಳನ್ನು ಜಾರಿರಿ ಮಾಡಬಾರದು . ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ತುರ್ತು
ಕಾಮಗಾರಿಗಳನ್ನು ಕೈಗೊಳ್ಳುವುದಿದ್ದರೆ ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳಬೇಕು . ಘಟಿಕೋತ್ಸವಗಳನ್ನು ಆಯೋಜಿಸಬಹುದು , ಆದರೆ ಅಧ್ಯಕ್ಷರಾಗಿ ಮಂತ್ರಿಗಳು ಭಾಗಿಯಾದರೂ ಕೂಡ  ಅವರು ಭಾಷಣ ಮಾಡಬಾರದು ಎಂದರು.

ಪ್ರೊಬೆಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ,ಜಿಲ್ಲೆಯ ಎಲ್ಲಾ ತಹಸೀಲ್ದಾರರು,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button