ಧಾರವಾಡರಾಜ್ಯಸ್ಥಳೀಯ ಸುದ್ದಿ

ಡಿಸಿ ನಿತೀಶ್ ಕುಮಾರ್ ಎಚ್ಚರಿಕೆ ನಿಡಿದ್ದು ಯಾರಿಗೆ? Power city news Exclusive

ಹುಬ್ಬಳ್ಳಿ

ರಾಜ್ಯ ಸರ್ಕಾರದಿಂದ ಸತತ ಸುರಿದ ಅಕಾಲಿಕ ಮಳೆಗೆ ಈಗಾಗಲೆ ಧಾರವಾಡದಲ್ಲಿ ಕುಸಿದ ಮನೆ, ಜಾನುವಾರುಗಳು ಮತ್ತು ಆಸ್ತಿ-ಪಾಸ್ತಿ ಹಾನಿಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಗೆ 14.5 ಕೋಟಿ ರೂ. ಅನುದಾನ ಬಂದಿದೆ.

ಧಾರವಾಡದ ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ಹಾನಿಗೊಳಗಾದ ಮನೆಗಳು ದನ, ಕರುಗಳ ಸಾವಿನ ಪರಿಹಾರ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ವರದಿ ಸಲ್ಲಿಸುವ ಮೂಲಕ ನೊಂದ ಸಂತ್ರಸ್ತ ರೈತರ ಪರಿಹಾರವನ್ನು ಕೊಡಿಸುವಲ್ಲಿ ಆಸಕ್ತಿ ವಹಿಸಬೇಕು ಎಂದು ಡಿಸಿ ನಿತೇಶ ಪಾಟೀಲ್ ಸೂಚಿಸಿದ್ದಾರೆ.

ಹಾಗೂ ವರದಿ ಸಲ್ಲಿಸುವ ನೆಪದಲ್ಲಿ ಸಂತ್ರಸ್ತರಿಗೆ ಹಣ ಕೇಳುವುದಾಗಲಿ ಅನವಶ್ಯಕ ಕಿರಿ-ಕಿರಿ ಉಂಟು ಮಾಡಿದ ಆರೋಪ ಕೇಳಿ ಬಂದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಪಿಡಿಓ ಗಳು ತಲಾಟಿಗಳು ಇಂತಹ ಸಂದರ್ಭದಲ್ಲಿ ಮುತುವರ್ಜಿ ವಹಿಸದೆ ಬೇಜವಾಬ್ದಾರಿತನ ತೊರಿದರೆ ಅಥವಾ ಲಂಚಕ್ಕಾಗಿ ಛೈಲಾಗಳನ್ನ ಬಳಿಸಿಕೊಳ್ಳಿತ್ತದ್ದರೆ, ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ತಿಳಿಸುವ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವನ್ನ ಪವರ್ ಸಿಟಿ ನ್ಯೂಸ್ ಜೋತೆಗೆ ಹಂಚಿಕೊಂಡಿದ್ದಾರೆ ಧಾರವಾಡದ ‌ಜಿಲ್ಲಾಧಿಕಾರಿ ನಿತೀಶ್ ಕುಮಾರ ಪಾಟೀಲ್ ..

Related Articles

Leave a Reply

Your email address will not be published. Required fields are marked *

Back to top button