ಧಾರವಾಡ
ನವೆಂಬರ 20 ರಿಂದ 23 ವರೆಗೆ ಜಿಲ್ಲೆಯಲ್ಲಿ ಮಳೆ ಮುಂದುವರಿಕೆ
ಧಾರವಾಡ
ಜಿಲ್ಲೆಯಲ್ಲಿ ನಾಳೆಯಿಂದ (ನ.20 ರಿಂದ 23 ವರೆಗೆ) ಮುಂದಿನ ನಾಲ್ಕು ದಿನಗಳ ವರಗೆ ಈಗ ಆಗುತ್ತಿರುವ ಪ್ರಮಾಣದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಜಿಲ್ಲಾಡಳಿತದಿಂದ ಮಳೆ ಹಾನಿ ತಡೆಯಲು ಅಗತ್ಯಕ್ರಮ ವಹಿಸಿದ್ದು, ಕೆರೆ ಕಟ್ಟೆಗಳ ಕಡೆ ಜನ, ಜಾನುವಾರ ಹೋಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.