
powercity news:
ಹುಬ್ಬಳ್ಳಿ/ಹಾವೇರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪಟಾಕಿ ಅಂಗಡಿಯೊಂದು ಹೊತ್ತಿ ಉರಿದ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದ್ದು ಈಗಷ್ಟೇ ಸಾವು ನೋವುಗಳ ಕುರಿತು ತನಿಖೆ ನಡೆಯುತ್ತಿದೆ.
ಭೂಮಿಕಾ ಟ್ರೇಡರ್ಸ್ ಪಟಾಕಿ ಅಂಗಡಿ ಸುಟ್ಟು ಕರಕಲಾಗಿದ್ದು, ಬೆಂಕಿಯ ಕಿನ್ನಾಲಿಗೆ ಆಕಾಶಕ್ಕೆ ಚಾಚಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಅಂಗಡಿ ಕೆಳಗಡೆ ಇದ್ದ ಬೈಕ್ ಹಾಗೂ ಟಾಟಾ ಏಸ್ ಗಾಡಿ ಸುಟ್ಟು ಭಸ್ಮವಾಗಿದೆ. ನಾಲ್ವರ ಮೃತ ದೇಹಗಳು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.
ವೀರೇಶ ಸಾತೇನಹಳ್ಳಿ ಎಂಬುವವರಿಗೆ ಸೇರಿದ್ದ ಪಟಾಕಿ ಅಂಗಡಿ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸದ್ಯದ ಮಾಹಿತಿ ಪ್ರಕಾರ ನಾಲ್ವರ ಮೃತದೇಹಗಳು ಪತ್ತೆಯಾಗಿವೆ.
ಮೃತರು ಹಾವೇರಿಯ ಕಾಟೇನಹಳ್ಳಿಯ, ದ್ಯಾಮಪ್ಪ ಓಲೇಕಾರ, ರಮೇಶ್ ಬಾರ್ಕಿ,ಹಾಗೂ ಶಿವಲಿಂಗ ಅಕ್ಕಿ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಕಾಣೆಯಾಗಿರುವ ಕಾರ್ಮಿಕರ ಶೋಧಕಾರ್ಯ ಮುಂದುವರೆದಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ಮುಂದುವರೆದಿದೆ.
