ಧಾರವಾಡ

ಪ್ರದೀಪ್ ಶೆಟ್ಟರ್ ಗೆಲುವಿಗೆ ಶ್ರಮಿಸಲು ಶಾಸಕ ಅಮೃತ ದೇಸಾಯಿ ಜನಪ್ರತಿನಿಧಿಗಳಿಗೆ ಮನವಿ


ಧಾರವಾಡ

ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಧಾರವಾಡ ಗ್ರಾಮಿಣ ಶಾಸಕರಾದ ಅಮೃತ ದೇಸಾಯಿ ಅವರು ಶುಕ್ರವಾರ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಪರ ತಮ್ಮ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದರು.


ಧಾರವಾಡ ತಾಲೂಕಿನ ನರೆಂದ್ರ, ಬೇಲೂರ, ಕೋಟೂರು, ತೆಗೂರು, ಮದನಭಾವಿ, ತಡಕೋಡ, ಹಂಗರಕಿ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಗ್ರಾಮ ಪಂಚಾಯತ ಸದಸ್ಯರಿಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಪರ ಮತಯಾಚನೆ ಮಾಡಿದರು.
ಈ ವೇಳೆ ಶಾಸಕರಾದ ಅಮೃತ ದೇಸಾಯಿ ಮಾತನಾಡಿ, ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗಾಗಿ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ ಅವರಿಗೆ ಮೊದಲ ಪ್ರಾಶ್ಯಸ್ತದ ಮತ ನೀಡಿ ಬಹುಮತಗಳಿಂದ ಗೆಲ್ಲಿಸಬೇಕು ಎಂದರು.


ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರ ಗ್ರಾಮಗಳು ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಬಜೆಟ್‌ ನಲ್ಲಿ ಗ್ರಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಸಾಕಷ್ಟು ಅನುದಾನ ಮೀಸಲಿಡುವ ಮೂಲಕ ಉತ್ತಮ ಆಡಳಿತ ನೀಡಿವೆ. ಪಕ್ಷದ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಅವರನ್ನು ಮತ್ತೊಮ್ಮೆ ಅತೀ ಹೆಚ್ಚು ಮತಗಳ ಅಂತರದಿಂದ ವಿಧಾನ ಪರಿಷತ್ ಸದಸ್ಯರನ್ನಾಗಿ ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ತಿಳಿಸಿದರು.


ಈ ಸಭೆಯಲ್ಲಿ ಮಾಜಿ ಶಾಸಕಿ ಶ್ರೀ ಮತಿ ಸೀಮಾ ಮಸೂತಿ, ಶ್ರೀ ಅಶೋಕ ದೇಸಾಯಿ, ಮಂಡಳ ಅಧ್ಯಕ್ಷರಾದ ಶ್ರೀ ರುದ್ರಪ್ಪ ಅರಿವಾಳ, ಎಪಿಎಂಸಿ ಅದ್ಯಕ್ಷರಾದ ಶ್ರೀ ಚನ್ನವೀರ ಗೌಡ ಪಾಟೀಲ್, ಶ್ರೀ ಸಂಗನಗೌಡ ರಾಮನಗೌಡರ, ಶ್ರೀ ಶಶಿಮೌಳಿ ಕುಲಕರ್ಣಿ, ಶ್ರೀ ನಾಗಪ್ಪ ಗಾಣಿಗೇರ, ಶ್ರೀ ಶಿವಾನಂದ ಗುಂಡಗೊವಿ, ಶ್ರೀ ಶಂಕರ ಕೊಮಾರ ದೇಸಾಯಿ, ಗ್ರಾ ಪಂ. ಅದ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button