ರಾಜಕೀಯರಾಜ್ಯಹುಬ್ಬಳ್ಳಿ

ಬಿಜೆಪಿಯ ಯತ್ನಾಳ್ ಕಾಂಗ್ರೆಸ್ಸಿನ ಕುಲಕರ್ಣಿ ಭೇಟಿಯ ಹಿಂದಿನ ಮರ್ಮವೇನು?

ಕೈ – ಕಮಲ ನಾಯಕರ ಭೇಟಿ- ಕುಶಲೋಪರಿ ಚರ್ಚೆ- ಸಾಕ್ಷಿಯಾದ ಶಿಗ್ಗಾಂವಿಯ ಗಂಗಿಮಡಿ

ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ರಾಜಕೀಯ ನಾಯಕರ ಬ್ರೇಕಿಂಗ್ ನ್ಯೂಸ್ ಇದು.

ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಬಿಜೆಪಿಯ ಫೈಯರ್ ಬ್ರ್ಯಾಂಡ್ ಕಟ್ಟಾ ಹಿಂದುತ್ವವಾದಿ ಆಗಿರುವ ವಿಜಯಪೂರದ ಶಾಸಕ ಬಸವನಗೌಡ ಪಾಟೀಲ್ ಯಾತ್ನಾಳ ಅವರ ಸುದ್ದಿ ಇದು.

ಈ ಇಬ್ಬರು ನಾಯಕರು ತಮ್ಮ ತಮ್ಮ ಪಕ್ಷದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ.

ಇವರಿಬ್ಬರೂ ಭೇಟಿಯಾಗಿ ಕೆಲಹೊತ್ತು ಚರ್ಚೆ ನಡೆಸಿರುವುದು ಕುತೂಹಲಕಾರಿ ಹಾಗೂ ಸದ್ಯದ ರಾಜಕೀಯ ವಾತಾವರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಇವರಿಬ್ಬರ ನಡುವೇ ನಡೆದ ಭೇಟಿ ರಾಜಕೀಯ ನಾಯಕರಲ್ಲಿ ಅಚ್ಚರಿ ಮೂಡಿಸಿರುವುದಂತು ಸತ್ಯ.


ಇಬ್ಬರು ನಾಯಕರ ಮುಂದಿನ ನಡೆಯೇನು ಎನ್ನುವ ಕುರಿತಾಗಿಯೂ ಫೋಟೊಗಳು ಹಲವು ಸಂಶಯಗಳನ್ನು ಹುಟ್ಟು ಹಾಕಿವೆ.

ಶಿಗ್ಗಾಂವ್ ತಾಲೂಕಿನ ಗಂಗಿಮಡಿಯಲ್ಲಿ ವಿನಯ ಕುಲಕರ್ಣಿ ಅವರು ರವಿವಾರದ ದಿನ ಕಾರ್ಯಕರ್ತರ ಭೇಟಿಯಾಗಲಿದ್ದಾರೆ ಎಂದು ಮೊದಲೇ ತಿಳಿಸಲಾಗಿತ್ತು.

ಅದರಂತೆ ಶಿಗ್ಗಾಂವ್ ತಾಲೂಕಿನಲ್ಲಿ ಇಂದು ಕಿತ್ತೂರು ಚೆನ್ನಮ್ಮ ಪುತ್ಥಳಿ ಅನಾವರಣದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಸವನಗೌಡ ಪಾಟೀಲ್ ಯಾತ್ನಾಳ ಗಂಗಿಮಡಿಯಲ್ಲಿ ವಿನಯ‌ ಕುಲಕರ್ಣಿ ಅವರನ್ನು ಭೇಟಿ ಮಾಡಿದ್ದಾರೆ.

ಈ ಭೇಟಿ ಬಗ್ಗೆ ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹಾಗೂ ಕುತೂಹಲಗಳು ಮುಂದೆ ಏನಾಗಲಿದೆ ಇವರ ರಾಜಕೀಯ ನಡೆ ಎನ್ನುವ ಬಗ್ಗೆ ಮಾತುಗಳು ನಡೆದಿವೆ.

ಅದೇನೆ ಆಗಲಿ ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ ಯಾರೂ ಮಿತ್ರಗಳಿಲ್ಲ ಎನ್ನುವ ಮಾತುಗಳು ಇವರಿಬ್ಬರ ಭೇಟಿಗೆ ಸಾಕ್ಷಿಯಾದಂತೆ ಆಗಿದೆ.

ಬಿಜೆಪಿಯ ಯತ್ನಾಳ್ ಕಾಂಗ್ರೆಸ್ಸಿನ ಕುಲಕರ್ಣಿ ಭೇಟಿಯ ಹಿಂದಿನ ಮರ್ಮವೇನು?

Related Articles

Leave a Reply

Your email address will not be published. Required fields are marked *

Back to top button