ಧಾರವಾಡರಾಜಕೀಯಸ್ಥಳೀಯ ಸುದ್ದಿಹುಬ್ಬಳ್ಳಿ

ಮಾಧ್ಯಮ ವರದಿ ಸುಳ್ಳು ನಾನು ಅಧಿಕೃತ ವಾಗಿ “ಕೈ” ಹಿಡಿದಿಲ್ಲ : ಚೇತನ್ ಹಿರೆಕೆರೂರ

ಕಳೆದ ಬಾರಿ ನಡೆದ ಅವಳಿನಗರದ ಪಾಲಿಕೆ ಚುನಾವಣೆಯಲ್ಲಿ, ವಾರ್ಡ್ 52 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹೊಸೂರಿನ ಚೇತನ್ ಹಿರೆಕೆರೂರ, ಬಿಜೆಪಿ ಹಾಗೂ ಕಾಂಗ್ರೆಸ್ ನ ಅನುಭವಿ ಹಿರಿಯ ರಾಜಕಾರಣಿಗಳನ್ನ ಚುಣಾವಣೆ ಫಲಿತಾಂಶದಲ್ಲಿ ಮಣ್ಣುಮುಕ್ಕಿಸಿದ್ದರು.

ಆದರೆ ಕಾಂಗ್ರೆಸ್ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಚೇತನ್ ಹಿರೆಕೆರೂರ ಇನ್ನೇನೂ ಕಾಂಗ್ರೆಸ್ ಪಕ್ಷ ಸೆರಿದ್ದಾರೆ ಎಂದೆ ಭಾವಿಸಲಾಗಿತ್ತು.

ಆದರೆ ಮೊನ್ನೇ ನಡೆದ ಕಾಂಗ್ರೆಸ್ ಸಮಾರಂಭದಲ್ಲಿ ರಜತ ಉಳ್ಳಾಗಡ್ಡಿ ಜೊತೆಗಿದ್ದ ಚೇತನ್ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೆರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಮತ್ತು ಪತ್ರಿಕೆ ಹಾಗೂ ಸುದ್ದಿ ಮಾಧ್ಯಮಗಳಲ್ಲಿಯೂ ಸಹ ಅದೆ ರೀತಿ ಭಿತ್ತರಗೊಂಡ ಸುದ್ದಿಗಳೇ ಸುಳ್ಳೆಂದಿರುವ ಚೇತನ್ ಖುದ್ದಾಗಿ ಎಲ್ಲ ಮಾಧ್ಯಮದವರಿಗೂ ಸ್ಪಷ್ಟಿಕರಿಸಲು ಮುಂದಾಗಿದ್ದಾರೆ.

ಹೌದು ಮೊನ್ನೆ ರಾತ್ರಿ ಪಕ್ಷೇತರ ಅಭ್ಯರ್ಥಿಯಾಗಿರುವ ಪಾಲಿಕೆ ಸದಸ್ಯ ಚೇತನ್ ಹಿರೆಕೆರೂರ ಮನೆಗೆ ರಜತ್ ಉಳ್ಳಾಗಡ್ಡಿ ನೇತೃತ್ವದಲ್ಲಿ ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಭೇಟಿ ನಿಡಿದ್ದರು.

ಡಿಕೆಶಿ.ಚೇತನ್ ಮನೆಗೆ ಭೇಟಿ ನಿಡಿದ ವೇಳೆ

ಚೇತನ್ ಹಾಗೂ ಕುಟುಂಬಸ್ಥರು ಅವರನ್ನು ಬರಮಾಡಿ ಕೊಂಡು ಸನ್ಮಾನಿಸಿ ಸತ್ಕರಿಸಿದ್ದಾರೆ. ಆದರೆ ಇದೆ ವೇಳೆ ಡಿ.ಕೆ‌.ಶಿ. ಚೇತನ್ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರಂತೆ. ಇದನ್ನೇ ಕಾಂಗ್ರೆಸ್ ಮುಖಂಡರು ಹಾಗೂ ಮಾಧ್ಯಮ ಸುದ್ದಿಗಾರರು ತಪ್ಪಾಗಿ ಅರ್ಥೈಸಿ ಕೊಂಡಿದ್ದಾರೆ ಎನ್ನುತ್ತಾರೆ.

File

ಆದ್ರೆ ಅಧಿಕೃತ ವಾಗಿ ನಾನು ಕಾಂಗ್ರೆಸ್ ಪಕ್ಷ ಸೇರಿಲ್ಲ ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸಿ ಕ್ಷೇತ್ರದಲ್ಲಿನ ಗುರುಹಿರಿಯರ ಸಲಹೆಯ ಮೇರೆಗೆ ಕಾಂಗ್ರೆಸ್ ಪಕ್ಷ ಸೆರ ಬೇಕೊ ಬೆಡವೋ ಎಂಬುದನ್ನ ಕಾಂಗ್ರೆಸ್ ಮುಖಂಡರಿಗೆ ತಿಳಿಸುವೆ.

ಮಾಧ್ಯಮ ಪ್ರಕಟನೆ

ಸಧ್ಯಕ್ಕೆ ನಾನು ಕಾಂಗ್ರೆಸ್ ಕಚೇರಿಗೆ ತೆರಳಿ ಅಧಿಕೃತ ವಾಗಿ ಪಕ್ಷ ಸೇರಿಲ್ಲ ಎಂದಿದ್ದಾರೆ. ಇದರಿಂದ 52ನೆ ವಾರ್ಡಿ ನ ಪಾಲಿಕೆ ಸದಸ್ಯರ ನಡೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತಾಗಿದೆ. ಒಂದು ವೇಳೆ ಕಾಂಗ್ರೆಸ್ ಸೇರದೆ ತಟಸ್ಥ ರಾದರೆ ! ಕಾಂಗ್ರೆಸ್ಸ ವಲಯದಲ್ಲಿ ಯುವ ಮುಖಂಡನಿಗಂತೂ ಮುಜುಗರದ ಸಂಗತಿ ಎದುರಾಗಲಿರುವುದು ಗ್ಯಾರಂಟಿ.

ಪವರ್ ಸಿಟಿ ನ್ಯೂಸ್ (ಸತ್ಯ ಸದಾಕಾಲ)

Related Articles

Leave a Reply

Your email address will not be published. Required fields are marked *

Back to top button