ಧಾರವಾಡ

ಮೀಟರ್‌ ಬಡ್ಡಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಶಾಸಕರ ಆಪ್ತ…

ಧಾರವಾಡ

“ಮೀಟರ್‌ ಬಡ್ಡಿ ಕಿರುಕುಳಕ್ಕೆ ಸಂಪಿಗೆ ನಗರದ ನಿವಾಸಿ ವಿಜಯ್‌ ಅಣ್ಣಪ್ಪ ನಾಗನೂರು (39 ವರ್ಷ ) ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ.

ಸಂಪಿಗೆ ನಗರದ ನಿವಾಸಿ ವಿಜಯ್‌ ಅಣ್ಣಪ್ಪ ನಾಗನೂರು ಎಂಬಾತ ಲಕ್ಷ್ಮೀಸಿಂಗನಕೇರಿಯ ಶಿವರಾಜ ಮಾಕಡವಾಲೆ ಎಂಬಾತನ ಬಳಿ ಮೀಟರ್‌ಬಡ್ಡಿ ರೂಪದಲ್ಲಿ ಹಣ ತೆಗೆದುಕೊಂಡಿದ್ದ.

ಸಾಲದ ಹಣ ಬಡ್ಡಿ‌ ಸೇರಿ 4 ಲಕ್ಷದವರೆಗೂ ಆಗಿತ್ತು.

ಈ ಬಗ್ಗೆ ವಿಜಯ ಸಾಲ‌ ಪಡೆದೊರ ಹತ್ತಿರ ಬ್ಲ್ಯಾಂಕ್ ಚೆಕ್ ಕೊಟ್ಟಿದ್ದನಂತೆ.

ಬಡ್ಡಿ ಸಮೇತ ಸಾಲ‌ಕೊಡದೇ ಹೋದ್ರೆ ಚೆಕ್ ಬೌನ್ಸ ಕೇಸ್ ಹಾಕೊದಾಗಿ ಬೆದರಿಕೆ ‌ಹಾಕಿದ್ದರು ಎಂದು ಡೆತ್ ನೋಟನಲ್ಲಿ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಎಷ್ಟು ಹಣ ನೀಡಿದರೂ ಸಾಲ ಕೊಟ್ಟವರ ಹಣದ ದಾಹ ಮುಗಿಯಲೇ ಇಲ್ಲ.

ಕೊನೆಗೆ ವಿಜಯ್‌ ಡೆತ್‌ನೋಟ್‌ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಧಾರವಾಡ ಗ್ರಾಮೀಣ ಶಾಸಕ ಅಮೃತ‌ ದೇಸಾಯಿ ಅವರ ಆತ್ಮೀಯನಾಗಿದ್ದ ವಿಜಯ್. ಹೀಗಾಗಿ ಶಾಸಕರೇ ಮುಂದೆ ನಿಂತು ಪೊಸ್ಟ್ ಮಾಟಮ್ ಆಗುವರೆಗೂ ಜಿಲ್ಲಾಸ್ಪತ್ರೆಯಲ್ಲಿದ್ದರು.

ಉಪನಗರ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು ಇನ್ಸಪೆಕ್ಟರ್‌ ರಮೇಶ್‌ ಹೂಗಾರ,ಪಿಎಸ್‌ಐ ಶ್ರೀಮಂತ್‌ ಹುಣಸೀಕಟ್ಟಿ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸಧ್ಯ ಲಕ್ಷ್ಮೀಸಿಂಗನಕೇರಿಯ ಶಿವರಾಜ ಮಾಕಡವಾಲೆ ಎಂಬಾತನನ್ನು ಅರೆಸ್ಟ್‌ಮಾಡಿದ್ದು ಮೀಟರ್‌ ಬಡ್ಡಿ ಯ ಹೆಚ್ಚಿನ ಮಾಹಿತಿಗಾಗಿ ನ್ಯಾಯಾಲಯದಿಂದ ಮೂರು ದಿನ ಪೊಲೀಸ್‌ ಕಸ್ಟಡಿಗೆ ಉಪನಗರ ಠಾಣೆಯ ಪೊಲೀಸರು ತೆಗೆದುಕೊಂಡಿದ್ದಾರೆ.

ಈ ಮೀಟರ್ ಬಡ್ಡಿ ಕಿರುಕುಳಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಿದೆ.

Related Articles

Leave a Reply

Your email address will not be published. Required fields are marked *

Back to top button