ಧಾರವಾಡರಾಜ್ಯಹುಬ್ಬಳ್ಳಿ

ಲಕ್ಷ ಗಾಯನ ಕಾರ್ಯಕ್ರಮಕ್ಕೆ ಸಿಎಂ ಮೆರಗು: ” ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಹಾಡು ಹಾಡಿ ಸಂಭ್ರಮ…

ನೂತನ ಶಿಕ್ಷ ನೀತಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಕನ್ನಡ ತಂತ್ರಾಂಶ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಅಶೋಕ ನಗರದ ಕನ್ನಡ ಭವನದಲ್ಲಿ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿಶ್ವದ ಎಲ್ಲಾ ಭಾಷೆಗಳಲ್ಲಿ ಕನ್ನಡ ಅಗ್ರಗಣ್ಯ ಸ್ಥಾನದ ಸ್ಥಾನದಲ್ಲಿ ಇದೆ. ಮಾತೃಭಾಷೆಯ ಅಭಿವೃದ್ದಿಗೆ ನಮ್ಮ ಸರ್ಕಾದ ಬದ್ದವಾಗಿದ್ದು, ತಂತ್ರಾಂಶ ಅಳವಡಿಸಿಕೊಳ್ಳುವದು ಇತ್ತೀಚಿನ ದಿನಗಳಲ್ಲಿ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.

ಹಾಡು ಹಾಡಿ ಸಂಭ್ರಮಿಸಿದ ಸಿಎಂ..
ಇನ್ನು ಗೀತಗಾಯನ ಕಾರ್ಯಕ್ರಮಕ್ಕೆ ಸಿಎಂ‌ ಬಸವರಾಜ್ ಬೊಮ್ಮಾಯಿ ಮೆರಗು ನೀಡಿದರು. ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಎಂಬ ಹಾಡಿಗೆ ಧ್ವನಿ ಗೂಡಿಸಿದ ಸಿಎಂ ಬೊಮ್ಮಾಯಿ ಕೈಯಲ್ಲಿ ‌ಕನ್ನಡ ಭಾವುಟ ಹಿಡಿದು ಸಂಭ್ರಮಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಒಟ್ಟಾಗಿ ಹಾಡುವ ಮೂಲಕ ಗೀತ ಗಾಯನ‌ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದು ವಿಶೇಷವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button