ಧಾರವಾಡರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಶ್ರೀ ಶಿಧ್ದಾರೂಢರ ಜಲಕೊಂಡದಲ್ಲಿ ವಿಧ್ಯಾರ್ಥಿ ಸಾವು

ಶ್ರೀ ಸಿಧ್ದಾರೂಢರ ಮಠದಲ್ಲಿ ಇಂದು ನಡೆಯ ಬಾರದ ಘಟನೆಯೊಂದು ನಡೆದಿದೆ.

ಹೌದು ಮಠದ ಜಲಕೊಂಡದಲ್ಲಿ ಉಮೇಶ ಜಲವಾಡ (೨೩) ಎಂಬ ಯುವಕ ಮುಳುಗಿ ಸಾವಿಗಿಡಾಗಿದ್ದಾನೆ.

ಇಂದು ಬೆಳಿಗ್ಗೆ ಶ್ರೀ ಸಿದ್ದಾರೂಢ ಮಠದ ಜಲಕೊಂಡದಲ್ಲಿರುವ ಉಭಯ ಶ್ರೀಗಳ ಮೂರ್ತಿ ಅಲಂಕರಿಸಲು ಈಜುಕೊಂಡು ಹೋಗಿ ಪೂಜೆ ಸಲ್ಲಿಸಲು ಮುಂದಾಗಿದ್ದ ಯುವಕ ಅರ್ಧದರಲ್ಲಿಯೆ ಸುಸ್ಥಾಗಿ ನೀರಿನಿಂದ ದಡ ಸೇರಲಾಗದೆ ಯುವಕ ಮುಳುಗಿ ಪ್ರಾಣ ಬಿಟ್ಟಿದ್ದಾನೆ.

ಸಾವನ್ನಪ್ಪಿರುವ ಉಮೇಶ್ ಜಲವಾಡ ಶ್ರೀ ಸಿದ್ಧಾರೂಢ ಮಠದ ಪಾಠ ಶಾಲೆಯ ವಿಧ್ಯಾರ್ಥಿಯಾಗಿದ್ದ ಎನ್ನಲಾಗಿದೆ.

ಜಲಕೊಂಡದಲ್ಲಿ ಸ್ಥಾಪನೆ ಮಾಡಿರುವ ಉಭಯ ಶ್ರೀ ಗಳ ಪೂಜೆಗೆ ತೆರಳಲು ಯಾವುದೆ ಅನೂಕೂಲ ವಿಲ್ಲ ಎನ್ನುವುದು ತಿಳಿದಿದ್ದರು ಯುವಕನ ಹುಂಬ ಸಾಹಸ ಆತನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.ಇನ್ನೂ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಎಂಟಕ್ಕೂ ಹೆಚ್ಚು ಸಿಬ್ಬಂದಿಗಳು ಯುವಕನ ಮೃತ ದೇಹ ಹೊರ ತೆಗೆದಿದ್ದಾರೆ. ಜಲಕೊಂಡಕ್ಕೆ ಭೆಟಿ ನೀಡಿದ ಹಳೆಹುಬ್ಬಳಿಯ ಪೊಲಿಸ್ ಠಾಣೆ ಸಿಬ್ಬಂದಿಗಳು ಘಟನೆ ಕುರಿತು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button