ಧಾರವಾಡ

ಸಮ್ಯಕ್ತ್ವ ಶಿರೋಮನಿ ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ 2021 ರ ಪಾವನ ವರ್ಷ ಯೋಗ ಕಾರ್ಯಕ್ರಮ

ಧಾರವಾಡ

ಸಮ್ಯಕ್ತ್ವ ಶಿರೋಮನಿ ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ 2021 ರ ಪಾವನ ವರ್ಷ ಯೋಗ ಕಾರ್ಯಕ್ರಮವನ್ನು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಆಯೋಜಿಸಲಾಗಿದೆ.

ಪರಮ ಪೂಜ್ಯ ಆಚಾರ್ಯ ರತ್ನ 108 ಬಾಹುಬಲಿ ಮಹಾರಾಜರ ಪರಮ ಶಿಷ್ಯರಾದ ಸಮ್ಯಕ್ತ್ವ ಶಿರೋಮನಿ ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ 2021 ರ ವರ್ಷ ಯೋಗ ಕಾರ್ಯಕ್ರಮದಡಿಯಲ್ಲಿ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಲಾಗಿದೆ.

ನಿರಂತರ 4 ತಿಂಗಳಿಂದ ಈ‌ ಕಾರ್ಯಕ್ರಮಗಳು ನಡೆಯುತ್ತಿವೆ.

ನವೆಂಬರ್ 29 ರಂದು ಮಂಗಲ ಕಾರ್ಯಕ್ರಮಗಳು ಈ ರೀತಿಯಾಗಿವೆ.
೧)ಬೃಹತ್ ಸಿದ್ಧಚಕ್ರ ಆರಾಧನಾ,೨) ಮೌಂಜಿ ಬಂಧನ ಕಾರ್ಯಕ್ರಮ,೩)ಜ್ಞಾನೇಶ್ವರ ಜೈನ ಅಲ್ಪಸಂಖ್ಯಾತರ ಕೋ-ಆಪ್ ಕ್ರೆಡಿಟ್ ಸೊಸೈಟಿ ಉದ್ಘಾಟನೆ,೪)108 ಭಕ್ತಿ ಆರತಿ ಕಿರುಹೊತ್ತಿಗೆ ಹಾಗೂ ಸಂಕ್ಷಿಪ್ತ ಪೂಜಾ ಪುಷ್ಪಂಜಲಿ ಜ್ಞಾನದೀಪ ಶಾಸ್ತ್ರಗಳ ಬಿಡುಗಡೆ, ೫)ಪಿಂಚಿ ಪರಿವರ್ತನಾ ಕಾರ್ಯಕ್ರಮ ಹಾಗೂ ಮುನಿ ಮಹಾರಾಜರಿಂದ ಆಶೀರ್ವಚನ.

ಕಾರಣ ಸರ್ವಧರ್ಮ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಪುಣ್ಯ ಸಂಪಾದನೆ ಮಾಡಿಕೊಳ್ಳಲು ಗರಗ ಗ್ರಾಮದ ಸಮಸ್ತ ಜೈನ ಸಮಾಜದ ಬಾಂಧವರು ವಿನಂತಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button