ಬೆಂಗಳೂರು

ಹೊಸ ವಿಭಿನ್ನ ಮಾದರಿಯ ಮ್ಯಾರೇಜ್ ಇನ್ವಿಟೇಶನ್ ಕಾರ್ಡ

ಬೆಂಗಳೂರು

ನಾವೆಲಾ ಟಿವಿ ಮಾಧ್ಯಮಗಳಲ್ಲಿ ಸದಾಕಾಲ ನ್ಯೂಸ್ ನೋಡತಾನೆ ಇರ್ತೇವಿ.

ಈ ಟಿವಿ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರ ಅಮೂಲ್ಯವಾದ ಸಮಯ ಹಾಗೂ ಕೆಲಸದ ಒತ್ತಡ ಯಾವ ರೀತಿ ಇರುತ್ತೆ ಅಂತಾನೂ ನಿಮಗೆಲ್ಲಾ ಗೊತ್ತು.

ಥೇಟ್ ಇದೇ ಟಿವಿ ಸ್ಕ್ರೀನ್ ಮಾದರಿಯಲ್ಲಿ ಇಲ್ಲೊಬ್ಬರು ವರದಿಗಾರ ಮದುವೆ ಆಮಂತ್ರಣ ಕಳಿಸಿದ್ದಾರೆ.

ಈ ಮದುವೆ ಆಮಂತ್ರಣ ತುಂಬಾನೆ ಡಿಫರೇಂಟ್ ಹಾಗೂ ಕಲರಪುಲ್ ಆಗಿದೆ.

ಧಾರವಾಡದ ಮಾಳಮಡ್ಡಿ‌ ನಿವಾಸಿ ಗಿರೀಶ ಕಮ್ಮಾರ್ ಅವರ ಮದುವೆ ನಿಗದಿ ಗ್ರಾಮದ ಜ್ಯೋತಿ ಎನ್ನುವರ ಜೋತೆ ಫೆಭ್ರುವರಿ 6 ರಂದು ನಡೆಯುತ್ತಿದೆ.

ಮದುಮಗ ನಾಡಿನ ಹೆಸರಾಂತ ಸುದ್ದಿವಾಹಿನಿ ಏಷ್ಯಾನೆಟ್ ಸುವರ್ಣವಾಹಿನಿ ಕನ್ನಡದಲ್ಲಿ ಗದಗ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾನೆ.

ಮದುಮಕ್ಕಳ ಹೆಸರಿನಿಂದ ಹಿಡಿದು, ಹೆಡಲೈನ್ಸ, ಬ್ರೇಕ್ಕಿಂಗ್, ಸ್ಕ್ರಾಲಿಂಗ್ ಎಲ್ಲವೂ ಅತ್ಯಂತ ಅಚ್ಚುಕಟ್ಟಾಗಿ ಮದುವೆ ಆಮಂತ್ರಣದಲ್ಲಿ ಮುದ್ರಿಸಲಾಗಿದೆ.

ಇವರ ಮದುವೆ ಆಮಂತ್ರಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ನಮ್ಮ ಪವರ್ ಸಿಟಿ ನ್ಯೂಸ್ ಕನ್ನಡದಿಂದಲೂ ಮದುವೆಯಾಗಲಿರುವ ಈ ನವಜೋಡಿಗೆ All The best???????

Related Articles

Leave a Reply

Your email address will not be published. Required fields are marked *