Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿಹುಬ್ಬಳ್ಳಿ

ಕೃಷಿ ಸಹಾಯಕ ನಿರ್ದೆಶಕರ ಮೇಲೆ ಹಲ್ಲೆ : ಆರೋಪಿಗಳ ಬಂಧನ!

ಇಂದು ಮಧ್ಯಾಹ್ನದ ವೇಳೆಯಲ್ಲಿ ಊಟ ಮುಗಿಸಿ ಕರ್ತವ್ಯ ಪಾಲನೆ ಮಾಡುತ್ತಿದ್ದ ಕುಂದಗೋಳದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸದಾಶೀವ ಕೃಷ್ಣ ಖಾನೂರವರ ಕಚೇರಿ ಗೆ ನುಗ್ಗಿದ ಇಬ್ಬರು ಸಹೋದರರಾದ. 1) ಬೀಮಪ್ಪ ದುಂಡಿಯವರ
2)ಬಸಪ್ಪ ದುಂಡಿಯವರ ಕ್ಷುಲ್ಲಕ ಕಾರಣಕ್ಕೆ ಏಕಾ ಎಕಿ ಧಾಂಧಲೆ ನಡೆಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಈ ವೇಳೆ ಅಲ್ಲಿಯೇ ಇದ್ದ ಕಂಪ್ಯೂಟರ್ ಆಪರೆಟರ್ ನಿರ್ದೆಶಕರ ಸಹಾಯಕ್ಕೆ ಬಂದಿದ್ದಾರೆ. ಆದರೆ ಅವರನ್ನು ಕೂಡ ಥಳಿಸಿದ ಸಹೋದರರು ಜೀವ ಬೆದರಿಕೆ ಒಡ್ಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನಿಡುತ್ತಿದ್ದಂತೆಯೆ ಕೂಡಲೆ ಸ್ಥಳಕ್ಕೆ ಧಾವಿಸಿದ ಕುಂದಗೋಳ ಠಾಣೆಯ ಪೊಲಿಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯಿಂದ ರೋಷಿ ಹೋದ ಕೃಷಿ ಸಹಾಯಕ ನಿರ್ದೇಶಕರು ಮತ್ತು ವರ್ಗ ಖುದ್ದಾಗಿ ತಪ್ಪಿತಸ್ಥರ ವಿರುಧ್ದ ಕುಂದಗೋಳ ಠಾಣೆಗೆ ಆಗಮಿಸಿ ದೂರು ನೀಡಿ ರಕ್ಷಣೆ ಕೊರಿದ್ದಾರೆ.

ಈ ವೇಳೆ ಆ ಇಬ್ಬರನ್ನು ತಪಾಸಣೆ ನಡೆಸಿದ ಪೊಲಿಸರಿಗೆ ಶಾಕ್ ಕಾದಿತ್ತು.

ಹೌದು ಅವರ ಬಳಿ ಖಾರದ ಪುಡಿ ಸಿಕ್ಕ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದರ ಹಿಂದಿನ ಉದ್ದೇಶವೇನು ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *