Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSHubballiPolitical newsTWINCITYರಾಜಕೀಯ

ಯೂಟ್ಯೂಬರ್‌ನ ಅಡ್ಡಗಟ್ಟಿ ಲಕ್ಷಾಂತರ ಮೌಲ್ಯದ ವಸ್ತುಗಳ ದರೋಡೆ!

Raja dakhani!

POWER CITYNEWS : HUBLI

ಹುಬ್ಬಳ್ಳಿ :ತಡ ರಾತ್ರಿ ಬೈಕ್ ಮೆಲೆ ಹೊರಟಿದ್ದ ಯುವಕನೋರ್ವನನ್ನು ಅಡ್ಡಗಟ್ಟಿದ ದರೋಡೆಕೋರರು ಆತನ ಬಳಿಯಿದ್ದ ಐ ಫೋನ್,(DIO) ಸ್ಕೂಟರ್ ಹಾಗೂ ಬಟ್ಟೆಗಳಿದ್ದ ಬ್ಯಾಗ್ ಸಮೇತ ಪರಾರಿಯಾದ ಘಟನೆ ಕಸಬಾ ಪೇಟೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಡಿಜಿಟಲ್‌ ಮಾರ್ಕೆಟಿಂಗ್ ಕೆಲಸ ಮಾಡಿಕೊಂಡಿರುವ ಯಲ್ಲಾಪುರ ಒಣಿಯ ನಿವಾಸಿ ಸಾಹೀಲ್ ಬಂಡೆ ಎಂಬ ಯುವಕ ಕಳೆದ 31/8/2024ರ ರಾತ್ರಿ 11: 50ರ ಸುಮಾರಿಗೆ ಯಲ್ಲಾಪುರ ಒಣಿಯ ಮೂಲಕ ಸ್ಕೂಟರ್(KA63Q 5134) DIO) ದಲ್ಲಿ ಎಸ್ ಎಂ ಕೃಷ್ಣ ನಗರದ ಸ್ನೇಹಿತನ ಮೆನೆಗೆ ತೆರಳುತ್ತಿದ್ದ ವೇಳೆಗೆ ಸ್ಮಶಾನ ಮಾರ್ಗ ಸಮೀಪ ಬರುತ್ತಿದ್ದಂತೆ ಬೈಕ್ ಮೇಲೆ ಬಂದ ಮುಸುಕು ಧಾರಿ ಮೂವರು ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾರೆ.

ಅಲ್ಲದೆ ಕಿರುಚಿದರೆ ಪ್ರಾಣ ತೆಗೆಯುವ ಬೆದರಿಕೆ ಹಾಕಿದ್ದಾರೆ. ಇದರಿಂದ ಬೆಚ್ಚಿದ ಸಾಹೀಲ್‌ನ ಬಳಿ ಇದ್ದ ಆ್ಯಪಲ್ ಐ ಫೋನ, ಒಂದು ಕಪ್ಪು ಬಣ್ಣದ ದ್ವಿಚಕ್ರ ವಾಹನ (ಸ್ಕೂಟರ್ KA63 Q 5134 DIO) ಹಾಗೂ ಬಟ್ಟೆಯ ಬ್ಯಾಗ ಸೇರಿದಂತೆ ಅಂದಾಜು ಎರಡು ಲಕ್ಷ ಮೂವತ್ತೈದು ಸಾವಿರ ಕಿಮ್ಮತ್ತಿನ ವಸ್ತುಗಳನ್ನು ಕಸಿದು ಪರಾರಿಯಾಗಿದ್ದಾರೆ.

ಇನ್ನೂ ನಡೆದ ಘಟನೆಯ ಬಗ್ಗೆ ಮನೆಯವರಿಗೆ ತಿಳಿಸಿದರೆ ಗಾಭರಿ ಗೊಳ್ಳಬಹುದೆನ್ನುವ ಕಾರಣಕ್ಕೆ ಎರಡು ದಿನಗಳ ವರೆಗೂ ಕಾದು ನೋಡಿದ ಸಾಹೀಲ್ ನಂತರ ಕಸಬಾ ಪೇಟೆ ಪೊಲೀಸರಿಗೆ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿ ಕೊಂಡ ಕಸಬಾ ಪೇಟೆ ಪೊಲೀಸರು ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಅಲ್ಲದೆ ದರೋಡೆ ಸಮಯಕ್ಕೆ ಸ್ಟ್ರೀಟ್ ಲೈಟ್‌ಗಳನ್ನ ಬಂದ ಮಾಡಿ ಈ ಕೃತ್ಯ ಎಸಗಿರುವ ಕುರಿತು ಅನುಮಾನ ವ್ಯಕ್ತವಾಗಿದ್ದು. ನಗರದಲ್ಲಿ ವ್ಯವಸ್ಥಿತ ದರೋಡೆಕೋರರ ತಂಡ ಆಕ್ಟೀವ್ ಆಗಿದಿಯಾ ಎನ್ನುವ ಪ್ರಶ್ನೇಗೆ ಪೊಲಿಸ್ ಇಲಾಖೆಯೆ ಉತ್ತರ ಕೊಡಲಿದೆ.

Related Articles

Leave a Reply

Your email address will not be published. Required fields are marked *