Jannah Theme License is not validated, Go to the theme options page to validate the license, You need a single license for each domain name.
BELAGAVIBREAKING NEWSTWINCITYVINAYKULKARNIಸ್ಥಳೀಯ ಸುದ್ದಿಹುಬ್ಬಳ್ಳಿ

ಫೆ.21ರಂದು ಚೆನ್ನಮ್ಮನ “ಕಿತ್ತೂರಿನಲ್ಲಿ”ಮಹಿಳಾ ಸಮಾವೇಶ!

ಮಹಿಳಾ ಸಮಾವೇಶ!

POWER CITYNEWS:HUBBALLI

ಧಾರವಾಡ: ಕಿತ್ತೂರ ರಾಣಿ ಚನ್ನಮ್ಮ ಬ್ರಿಟೀಷರ ವಿರುದ್ಧ ನಡೆಸಿದ ಹೋರಾಟದ ದ್ವಿಶತಮಾನೋತ್ಸವದ ಪ್ರಯುಕ್ತ ಫೆ.21ರಂದು ಚನ್ನಮ್ಮನ ಕಿತ್ತೂರಿನಲ್ಲಿ ಒಂದು ದಿನದ ಮಹಿಳಾ ಸಮಾವೇಶ ಆಯೋಜಿಸುವ ಮೂಲಕ “ನಾನೂ ರಾಣಿ ಚನ್ನಮ್ಮ’ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತೆ ಶಬನಮ್ ಹಶ್ಮಿ ಹೇಳಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.21ರಂದು ಬೆಳಗ್ಗೆ 9 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತದಿಂದ ಕೋಟೆವರೆಗೆ ಜಾಥಾ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಸಮಾವೇಶಕ್ಕೆ ಚಾಲನೆ ಸಿಗಲಿದೆ. 20 ರಾಜ್ಯಗಳಿಂದ ಸುಮಾರು 3000 ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಾವೇಶದಲ್ಲಿ ಮಹಿಳಾ ಪರವಾದ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *