BREAKING NEWSCITY CRIME NEWSDHARWADHubballi

ಜೈಲು ಸಿಬ್ಬಂದಿ ಖೈದಿಯ ನಡುವೆ ಮಾರಾ-ಮಾರಿ!

Central jail dharwad!

POWERCITY : BREAKING NEWS

ಧಾರವಾಡ ಬ್ರೇಕಿಂಗ್

ಕ್ಷುಲ್ಲಕ ಕಾರಣಕ್ಕೆ ಖೈದಿ ಮತ್ತು ಜೈಲು ಸಿಬ್ಬಂದಿಯ ನಡುವೆ ಮಾತಿಗೆ ಮಾತು ಬೆಳೆದ ಪರಿಣಾಮ ಪರಸ್ಪರ ಹೊಡೆದಾಡಿಕೊಂಡ ಘಟನೆ ಸಬರ್ಬನ್ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿನ ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸಂಭವಿಸಿದೆ.

ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಶಾಂತ ಅಲಿಯಾಸ್ ಪಾಚು ಹಾಗೂ ಜೈಲು ಸಿಬ್ಬಂದಿಯಾದ ಮೋಹನ ಸಿದ್ದಪ್ಪ ಬಡಿಗೇರ ಎಂಬುವರ ಮಧ್ಯೆ ಅದ್ಯಾವುದೋ ವಿಷಯಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ಕಾರಣವಾಗಿದೆ.

ಇ ವೇಳೆ ಖೈದಿ ಕೈಗೆ ಸಿಕ್ಕ ಬಾಚಣಿಕೆಯಿಂದಲೆ ಜೈಲುಸಿಬ್ಬಂದಿಯ ಮೇಲೆ ಮನಬಂದಂತೆ ಪರಚಿದ್ದಾನೆ. ಘಟನೆಯಲ್ಲಿ ಇಬ್ಬರಿಗೂ ಗಾಯವಾಗಿದ್ದು ಇಬ್ಬರು ಸಹ ಧಾರವಾಢ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿನಿಡಿದ್ದು ತನಿಖೆ ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button