BREAKING NEWSCITY CRIME NEWSDHARWADHubballiSand Mafiya

ಅಟ್ಟಾಡಿಸಿ ರೈಡ್ ಮಾಡಿದ ಮಹೀಳಾ ಅಧಿಕಾರಿ :ಅಕ್ರಮ ಮರಳು ದಂಧೆಕೋರರು ಸ್ಥಳದಿಂದ ಪರಾರಿ !

SAND MAFIYA !

Click to Translate

POWERCITY NEWS : SAND MAFIYA

Hubballi

ಹುಬ್ಬಳ್ಳಿ: ಅವಳಿ ನಗರದ ಹೊರ ಪ್ರದೇಶದೆಲ್ಲಡೆಯೂ ನಾಯಿ ಕೊಡೆಗಳಂತೆ ಪಾಳು ಬಿದ್ದ ಹಾಗೂ ಕೊಳಚೆ ಚರಂಡಿ ಹಳ್ಳದ ದಂಡೆಗಳಿಗೆ ಪಂಪ್ ಸೆಟ್ ಬೋರವೆಲ್ ಬಳಿಸಿ ಮರಳು ಫಿಲ್ಟರ್ ಮಾಡುತ್ತಿದ್ದ ಅಡ್ಡೆಗಳ ಮೇಲೆ ಹಠಾತ್ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗಳಾದ ಬಿಂದನಾ ಪಾಟೀಲ್ ಅವರು ಖಚಿತ ಮಾಹಿತಿಯನ್ನು ಆಧರಸಿ ನಡೆಸಿದ ದಾಳಿಯಲ್ಲಿ ಒಟ್ಟು 7 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಸುವ ಮೂಲಕ ಅಕ್ರಮ ಮರಳು ದಂಧೆಕೊರರಿಗೆ ಕಾನೂನು ಪಾಠ ಮಾಡಿದ್ದಾರೆ.

ನಗರದ ಗಬ್ಬೂರು ಹಾಗೂ ಕುಂದಗೋಳ ಕ್ರಾಸ್ ಬಳಿಯಲ್ಲಿ ಪಾಸ್ ಇಲ್ಲದ ಎರಡು ಮರಳು ಟಿಪ್ಪರ್ ಹಾಗೂ ಅಕ್ರಮ ಫಿಲ್ಟರ್‌ನಲ್ಲಿ ನಿರತವಾಗಿದ್ದ ಅದರಗುಂಚಿ ಬಳಿಯಲ್ಲಿನ ನಾಲ್ಕು ಲಾರಿಗಳನ್ನು ಖಚಿತ ಮಾಹಿತಿಯ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬಿಂದನಾ ಪಾಟೀಲ್ ನೇತೃತ್ವದ ತಂಡ ದಾಳಿ ಮಾಡಿ ವಾಹನಗಳನ್ನು ಸೀಜ್ ಮಾಡಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಅಷ್ಟೇ ಅಲ್ಲದೆ, ಕಾರವಾರ ರಸ್ತೆಯಲ್ಲಿರುವ ಅಕ್ರಮ ಮರಳು ಫಿಲ್ಟರ್ ಗಳ ಮೇಲೂ ದಾಳಿ ಮಾಡಿದ್ದು, ಈ ವೇಳೆ ಅಡ್ಡೆಯಲ್ಲಿದ್ದ ದಂಧೆಕೋರರು ಖಡಕ್ ಅಧಿಕಾರಿಯನ್ನ ಕಾಣುತ್ತಲೇ ಅಡ್ಡೆಯಿಂದ ಪರಾರಿಯಾಗಿದ್ದಾರೆ .

ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ವಿರುದ್ಧ ಹಠಾತ್‌ ಕಾರ್ಯಾಚರಣೆ ನಡೆಯುತ್ತಲೇ ಇರುತ್ತದೆ ಎಂದು ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ದಂಧೆಕೋರರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪವರ್ ಸಿಟಿ ನ್ಯೂಸ್ ಇ ಹಿಂದಿನಿಂದಲೂ ನಗರ ಪ್ರದೇಶದ ಕಟ್ಟಡ ನಿರ್ಮಾಣದ ಗ್ರಾಹಕರಿಗೆ ಕಡಿಮೆ ಲೋಡ್ ಮರಳು ಕೊಟ್ಟು ದೋಖಾ ಮಾಡುತ್ತ ಬರುತ್ತಿರುವ ಮರಳು ಮಾರಾಟಗಾರರಿಗೂ ಅತಿ ಶೀಘ್ರದಲ್ಲೇ ಕಾದಿದೆ ಪವರ್ ಶಾಕ್!.ಖಾವಿ ತೊಟ್ಟ ಇವನ ಅಡ್ಡೆಗೂ ಬೆಕಿದೆ ಕಾನುನೂ ಅರಿವು!

Related Articles

Leave a Reply

Your email address will not be published. Required fields are marked *

Back to top button