ಧಾರವಾಡ

sdmನಲ್ಲಿ ಕೊರೊನಾ ಕಂಟ್ರೋಲ್ ಮಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್

ಕೊರೊನಾ ಹಾಟಸ್ಪಾಟ್ ಆಗಿದ್ದ ಧಾರವಾಡದ
ಎಸ್.ಡಿ.ಎಂ ಮೆಡಿಕಲ್‌ ಕಾಲೇಜ್ ಕೊರೊನಾ ಕೇಸ್ ಕಂಟ್ರೋಲ್ ಮಾಡಲು ಸಿಎಂ ಬೊಮ್ಮಾಯಿ‌ ಹಾಗೂ‌ ಧಾರವಾಡ ಜಿಲ್ಲಾಧಿಕಾರಿ ‌ನಿತೇಶ ಪಾಟೀಲ್ ಯಶಸ್ವಿಯಾಗಿದ್ದಾರೆ. ಇದರಿಂದ ಧಾರವಾಡ ಜಿಲ್ಲಾಡಳಿತ ಹಾಗೂ ಜನತೆ
ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.ಜಿಲ್ಲೆಯ ಜನರಿಗಿದ್ದ ಕೊರೊನಾ ಆತಂಕ ದೂರವಾಗಿದೆ.

ಕಳೆದ 4-5 ದಿನಗಳಿಂದ ಧಾರವಾಡ‌ ಜಿಲ್ಲೆ ಅಷ್ಟೇ ಅಲ್ಲದೇ ದೇಶಾದ್ಯಂತ ಸುದ್ದಿಯಾಗಿದ್ದ ಧಾರವಾಡಡ ಎಸಡಿಎಂ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯ ಕೊರೊನಾ ಕೇಸ್ ಕಂಟ್ರೋಲಗೆ ಬಂದಿವೆ. ಜಿಲ್ಲಾಡಳಿತ ಕೈಗೊಂಡ ಬಬೋಲ್ ಜೋನ್ ಇದಕ್ಕೆ ಕಾರಣವಾಗಿದೆ. ಇದರಿಂದ ಜಿಲ್ಲೆಯ ಕೊರೊನಾ
ಶೇ‌.16 ರಷ್ಟಿದ್ದ ಪಾಸಿಟಿವಿಟಿ‌ ದರ ಏಕಾಏಕಿ‌ ಶೇ.1.12 ಕ್ಕೆ ಇಳಿಕೆಯಾಗಿದೆ. 3973 ಎಸ್.ಡಿ.ಎಂನ ಮೆಡಿಕಲ್‌ ಕಾಲೇಜು ಹಾಗೂ ಸಿಬ್ಬಂದಿಯ ಕೊವಿಡ್ ರಿಪೋರ್ಟ ಜಿಲ್ಲಾಡಳಿತಕ್ಕೆ ಸಲ್ಲಿಕೆ ಆಗಿದ್ದು, ಅದರಲ್ಲಿ
3973 ರಲ್ಲಿ ಜನರಲ್ಲಿ 306 ಜನರಲ್ಲಿ ಮಾತ್ರ ಕೋವಿಡ್ ಪತ್ತೆ ಆಗಿದೆ..

ಶನಿವಾರದ 2217 ವ್ಯಕ್ತಿಗಳ ತಪಾಸಣೆಗಳಲ್ಲಿ 25 ಜನರಿಗೆ ಕೋವಿಡ್ ದೃಢ

ಇಂದು ಆಸ್ಪತ್ರೆಗೆ ಧಾರವಾಡ ಜಿಲ್ಲಾಡಳಿತದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಯಶಸ್ವಿಯಾಗಿದ್ದಾರೆ. ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಭೇಟಿ‌ ನೀಡಿ‌ ಪರಿಶೀಲನೆ ‌ನಡೆಸಿದ್ರು.
3 ದಿನಗಳಲ್ಲಿ ಒಟ್ಟು ತಪಾಸಣೆ ಮಾಡಿದ್ದ
1756 ಜನರಲ್ಲಿ 281 ಜನರಲ್ಲಿ ಸೋಂಕು ಪತ್ತೆಯಾಗಿತ್ತು.
ಇದರಿಂದ ಪಾಸಿಟಿವಿಟಿ ದರ ಶೇ.16 ಕ್ಕೇರಿತ್ತು. ರೋಗಿಗಳು,ಅವರ ಆರೈಕೆದಾರರಲ್ಲಿ ಈ ಸೋಂಕು ವ್ಯಾಪಿಸಿಲ್ಲ.
ಆಸ್ಪತ್ರೆ ಓಪಿಡಿ ಬಂದ
ಡೆಲವರಿ ಕೇಸ್, ಏಮರ್ಜೇನ್ಸಿ ಕೇಸ್ ಗಳು ಮಾತ್ರ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಮುನೇನಕೊಪ್ಪ ಹಾಗೂ ಶಾಸಕ ಅರವಿಂದ ಬೆಲ್ಲದ ಹೇಳಿದ್ರು..

**ಕೊರೊನಾನಿಯಂತ್ರಣಕ್ಕೆ ಶ್ರಮಿಸಿದ ಜಿಲ್ಲಾಧಿಕಾರಿ*

ಜಿಲ್ಲಾಧಿಕಾರಿ ಕಾರ್ಯವೈಖರಿಗೆ ಮೆಚ್ಚುಗೆ ಮಾತುಗಳು


ಎಸ್ ಡಿ ಎಂ ಓಪಿಡಿ ಬುಧವಾರದವರೆಗೂ ಬಂದ್ ಮಾಡಲಾಗಿದೆ.
ಎಸ್ ಡಿ ಎಂ ಸುತ್ತಲಿನ 500 ಮೀಟರ್ ವ್ಯಾಪ್ತಿಯ ಶಾಲೆ ಕಾಲೇಜುಗಳಿಗೆ ಡಿಸೆಂಬರ್ 1 ರವರೆಗೆ ಮೂರುದಿನಗಳ ಕಾಲ ರಜೆ ಮುಂದುವರಿಕೆ ಮಾಡಲಾಗಿದೆ. ಇದರ ಜೊತೆಗೆ
ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸರು,ಎಸ್ ಡಿ ಎಂ ಆಡಳಿತ ಮಂಡಳಿ ಬಿಗಿಕ್ರಮಗಳು ಮುಂದುವರಿಕೆ ಮಾಡಲಾಗಿದೆ.


ಧಾರವಾಡ ಜಿಲ್ಲಾಧಿಕಾರಿ ಕೊರೊನಾ ಕಟ್ಟಿ ಹಾಕುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button