ಅಕ್ರಮ ಉಸುಕಿನ ಸಾಗಾಟ ಪೊಲಿಸ್ ವಶಕ್ಕೆ ಎರಡು ಲಾರಿ!
ಹುಬ್ಬಳ್ಳಿ
ಅಕ್ರಮ ಉಸುಕು ಸಾಗಾಟ ನಡೆಸುತ್ತಿದ್ದ ಎರಡು ಲಾರಿಗಳನ್ನು ಮೈನ್ಸ್ ಆ್ಯಂಡ್ ಜಿಯೊಲಜಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಕುಸುಗಲ್ ರಸ್ತೆಯಲ್ಲಿ ಒಂದು ಲಾರಿಯಲ್ಲಿ ನದಿ ಪಾತ್ರದ ಉಸುಕು ಹಾಗೂ ಮತ್ತೊಂದು ಲಾರಿಯಲ್ಲಿ ಎಮ್ ಸಾಂಡ್ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಲಾರಿಗಳನ್ನ ತಡೆದು ಪರಿಸಿಲಿಸಿದಾಗ. ಒಂದು ಲಾರಿಗೆ ಪಾಸ್ ಇಲ್ಲದ ಉಸುಕು ಸಾಗಿಸುತ್ತಿದ್ದರೆ, ಮತ್ತೊಂದು ಲಾರಿಯಲ್ಲಿ ಹಳೆಯ ದಿನಾಂಕದ ಪಾಸುಗಳನ್ನೆ ಅಧಿಕಾರಿಗಳಿಗೆ ತೊರಿಸಿ ಯಾಮಾರಿಸಲು ಯತ್ನಿಸಿದ ಚಾಲಕನನ್ನು ಹಾಗೂ ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕೇಶವಾಪೂರ ಪೊಲಿಸ್ ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಕಟ್ಟಡ ಬಳಕೆಯ ಮರಳನ್ನು ಅವಳಿನಗರದಲ್ಲಿ ಅಕ್ರಮ ವಾಗಿ ಮರಳು ಸಂಗ್ರಹಿಸಿ ಮನಸ್ಸೋ ಇಚ್ಛೆಗೆ ಮಾರುತ್ತಿರುವ ಅಕ್ರಮ ಮರಳು ದಂಧೆಕೊರರು ಕಟ್ಟಡ ನಿರ್ಮಾಣ ಮಾಡುವ ಮಾಲಿಕರಿಗೆ ಹಾಡ ಹಗಲೆ ಟೋಪಿ ಹಾಕುತ್ತಿರುವ ಪ್ರಸಂಗಗಳು ಸಾಕಷ್ಟು ನಡೆಯುತ್ತಿವೆ. ಅಲ್ಲದೆ ಒಂದೆ ಪಾಸನ್ನು ಮುಂದಿನ ದಿನಾಂಕದ ವರೆಗೂ ನಕಲು ಮಾಡಿ ಸರಕಾರದ ಬೊಕ್ಕಸಕ್ಕೆ ಕೊಳ್ಳಿ ಇಡುತ್ತಿರುವ ಸಂಗತಿ ಹೊಸತೇನಲ್ಲ.