ಅಕ್ರಮ ಮಣ್ಣು ಗಣಿಗಾರಿಕೆ ಹಾಗೂ ಸಾಗಣಿಕೆಗೆ ಇಲಾಖೆಯ ಅಧಿಕಾರಗಳ ದಿವ್ಯ ನಿರ್ಲಕ್ಷ!
ಹುಬ್ಬಳ್ಳಿ
ಅವಳಿನಗರದಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಮಣ್ಣು ಕಳ್ಳತನ ಭರ್ಜರಿ ಸಾಗಿದೆ.
ಹುಬ್ಬಳ್ಳಿ ಧಾರವಾಡದಲ್ಲಿ ನಿರ್ಮಾಣವಾಗುತ್ತಿರುವ ಸಾವಿರಾರು ಮನೆಗಳು ಹಾಗೂ ಬೃಹತ್ ಕಟ್ಟಡಗಳಿಗೆ ಮರಳು ಹಾಗೂ ಮಣ್ಣಿನ ಅವಶ್ಯಕತೆ ಇರುವುದನ್ನೆ ಬಂಡವಾಳ ಮಾಡಿಕೊಂಡಿರುವ ಒಂದಷ್ಟು ಟ್ರಕ್ ಮಾಲಿಕರು ಹಾಗೂ ಇವರ ಅಕ್ರಮ ಕಾಯಕದ ಎಂಜಲಿಗೆ ಸದಾ ಬಾಯ್ತರೆದು ಕುಳಿತಿರುವ ಸಂಭಂದಪಟ್ಟ ಅಧಿಕಾರಿಗಳು ಕರ್ತವ್ಯ ಮೆರೆಯದೆ ತಂಪಾದ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡುವುದೆ ದಿನಚರಿ ಯಾಗಿದೆ.
ಇನ್ನೂ ಸರ್ಕಾರಿ ಜಾಗವಾಗಲಿ ಖಾಸಗಿ ಜಮಿನಾಗಲಿ ಮೊರಮ್ ಮಣ್ಣು ಅಗೆದು ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಮಾರಾಟ ಮಾಡುತ್ತಿರುವ ದೃಶ್ಯ ಇಲ್ಲಿನ ತಡಸಿನಕೊಪ್ಪ, ಸತ್ತೂರ ಹಾಗೂ ಇಟಿಗಟ್ಟಿ ರಸ್ತೆಯ ಮಧ್ಯಭಾಗದ ಐಐಟಿಯ ಅಕ್ಕ ಪಕ್ಕ ಹುಡಾ ಗೆ ಸಂಭಂದಿಸಿದ ಖಾಲಿ ಜಮೀನುಗಳಲ್ಲಿ ಬೆಳ್ಳಂ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ಹಾಡಹಗಲೆ ಜೇಸಿಬಿ ಟ್ರ್ಯಾಕ್ಟರ್, ಟ್ರಕ್ ಬಳಸಿ ಅಕ್ರಮ ಮಣ್ಣುಗಾರಿಕೆ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇ ಬಗ್ಗೆ ಪೊಲಿಸರಿಂದ ಹಿಡಿದು ಎಲ್ಲ ಅಧಿಕಾರಿಗಳಿಗೂ ಮಾಹಿತಿ ಇದ್ದರು ಸಹ ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಟಾಸ್ಕ್ ಫೊರ್ಸ್ ನಲ್ಲಿರುವ ಪೊಲಿಸ್ ಇಲಾಖೆಯಾಗಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಹಿಂದೇಟು ಹಾಕುತ್ತಿವೆಯೆ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.