ಸ್ಥಳೀಯ ಸುದ್ದಿ

ಪೊಲೀಸ್ ಠಾಣೆ- ತಹಶೀಲ್ದಾರ ಕಚೇರಿ ಮುಂದೆ ಮಹಿಳೆಯರ ಪ್ರತಿಭಟನೆ

ಬೀದರ್

ಗಡಿನಾಡು ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೆಳಕೆರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಮಾಡಗೊಳ. ಬನ್ನಳ್ಳಿ. ಹೊಸಳ್ಳಿ. ಬೆಳಕೇರಾ
ಗ್ರಾಮದ ಕೂಲಿ ಕಾರ್ಮಿಕ ಮಹಿಳೆಯರು ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿ ಎಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ರು.

ತಾವು ಮಾಡಿದ ಕೂಲಿ ಹಣವನ್ನು ಗಂಡದೀರು ಜಗಳವಾಡಿ ಹೊಡೆದು ಬಡೆದು ಸಾರಾಯಿ ಕುಡಿಯಲು ಹಣ ಕಸಿದುಕೊಳ್ಳುತ್ತಿದ್ದಾರೆ. ಮನೆಯ ಉಪಜೀವನಕ್ಕಾಗಿ ತಂದಿಟ್ಟ ಅಕ್ಕಿ ಮತ್ತು ಜೋಳವನ್ನು ಕೂಲಿ ಕೆಲಸಕ್ಕೆ ಹೋದಾಗ ನಮ್ಮ ಗಂಡಂದಿರು ಅಂಗಡಿಗಳಿಗೆ ಮಾರಿ ಬಂದ ಹಣದಿಂದ ಸಾರಾಯಿ ಕುಡಿದು ಗಲಾಟೆ ಮಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಚಿಟಗುಪ್ಪದ ವೈನ್ ಶಾಪ್ ಅಂಗಡಿಗಳಿಂದ ಅಕ್ರಮ ಸಾರಾಯಿ ದ್ವಿಚಕ್ರ ವಾಹನದ ಮೇಲೆ ತಂದು ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಗೆ ಕೊಡುತ್ತಿದ್ದಾರೆ.

ತಮ್ಮ ಗ್ರಾಮ ಪಂಚಾಯತ ಅಧೀನದಲ್ಲಿ ಸಾರಾಯಿ ಮಾರಾಟ ನಿಷೇಧಿಸಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಣಿಕ್ ಹಿಪ್ಪರಗಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ತಹಶೀಲ್ದಾರರಿಗೆ ಪ್ರತಿಭಟನೆ ಮೂಲಕ ಮನವಿ ಪತ್ರ ಸಲ್ಲಿಸಿದರು.

ಮಹಿಳೆಯರು ಪೊಲೀಸ್ ಠಾಣೆಗೆ ತೆರಳಿ psi ರವರಿಗೂ ಮನವಿ ಸಲ್ಲಿಸಿದರು

ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿದಾಗ ಜಿಲ್ಲೆಯಿಂದ ತಂಡ ರಚಿಸಿ
ಎರಡು ದಿನದಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು……..

ಮಹೇಶ ಸಜ್ಜನ್
ಪವರ್ ಸಿಟಿ‌
ನ್ಯೂಸ್ ಕನ್ನಡ ಬೀದರ್

Related Articles

Leave a Reply

Your email address will not be published. Required fields are marked *