ಸ್ಥಳೀಯ ಸುದ್ದಿ

ಅಧಿಕಾರ ಶಾಶ್ವತವಲ್ಲಾ. ಹುಟ್ಟಿದ ಮೇಲೆ ಸಾಯಲೇಬೇಕು – ವಿನಯ ಕುಲಕರ್ಣಿ

ಸವದತ್ತಿ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಂಹೊಂಗಲ ಗ್ರಾಮದಲ್ಲಿ ಕ್ಷೇತ್ರದ ಜನರ ನಡುವೆ ಮಾಜಿ‌ ಸಚಿವ ವಿನಯ ಕುಲಕರ್ಣಿ ಪ್ರಚಾರ ನಡೆಸಿ‌ ಕೆಲ ಕಾಲ ಭಾವುಕರಾದ್ರು.

ಹುಟ್ಟಿದಮೇಲೆ ಪ್ರತಿಯೊಬ್ಬರು ಸಾಯಲೇಬೇಕು. ಅಧಿಕಾರ ಶಾಶ್ವತವಲ್ಲಾ ಜನರಿಗಾಗಿ ನಾನು ನೇರವಾಗಿ ಮಾತನಾಡಿದ್ದೆ ತಪ್ಪಾಯ್ತು. ಅಭಿಮಾನಿಗಳು ನನ್ನ ಮೇಲೆ ತೋರುತ್ತಿರುವ ಪ್ರೀತಿಗೆ ನಾನು ಏನು ಕೊಟ್ಟರು ಸಾಲೋದಿಲ್ಲಾ ಎಂದರು.

ನಾಮಪತ್ರ ಸಲ್ಲಿಕೆ ವೇಳೆ ಬಿರು ಬಿಸಲನ್ನು ಲೆಕ್ಕಿಸದೇ ಭಾಗವಹಿಸಿದ್ರಿ, ನಾನು ಅಧಿಕಾರದಲ್ಲಿ ಇದ್ದಾಗ ರಾಜ್ಯದಲ್ಲಿಯೇ ಮಾದರಿ ಸುಮಾರು 850 ಕಿ.ಮೀ ನಮ್ಮ ಹೊಲ‌ ನಮ್ಮ ರಸ್ತೆ ಮಾಡಿಸಿರುವೆ. ರಾಜ್ಯದ ಮಂತ್ರಿಗಳು ಇದನ್ನು ವಿಧಾನಸೌಧದಲ್ಲಿ ನೋಡುವಂತಾಗಿದೆ ಎಂದರು.

ಮನೆ ಬಿದ್ದವರಿಗೆ ಪರಿಹಾರ ಕೊಡಲು ಆಗುತ್ತಿಲ್ಲಾ. ಅಧಿಕಾರ ಯಾವತ್ತಿಗೂ ಶಾಶ್ವತವಲ್ಲಾ ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ ನಾಯಕ ತವನಪ್ಪ ಅಷ್ಟಗಿ ಮಾತನಾಡಿ, ವಿನಯ ಕುಲಕರ್ಣಿ ಅವರ ಕುಟುಂಬದ ಪರಿಸ್ಥಿತಿ ನೋಡಲು ಆಗುತ್ತಿಲ್ಲಾ. ದಿನದ 24 ಗಂಟೆ ಕೆಲಸ ಮಾಡಿ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡುವುದರ ಜೋತೆಗೆ ಮಂತ್ರಿಯನ್ನಾಗಿ ಮಾಡಬೇಕು ಎನ್ನುವುದು ನನ್ನ ಆಸೆ ಇದೆ.

ಹೀಗಾಗಿ ಬಿಜೆಪಿ ಅಭ್ಯರ್ಥಿಯ ಡೆಪಾಸಿಟ್ ಕಳೆದುಕೊಳ್ಳುವಷ್ಟು ಮತದಾನ ಮಾಡಿ ಎಂದು ಹೇಳಿದ್ರು.

ಇದೇ ಸಂದರ್ಭದಲ್ಲಿ ನೂರಾರು ವಿನಯ ಕುಲಕರ್ಣಿ ಅವರ ಅಭಿವೃದ್ಧಿ ಕೆಲಸ ಮೆಚ್ಚಿ ಹಾಗೂ ತವನಪ್ಪ ಅಷ್ಟಗಿ ಅಭಿಮಾನಿಗಳು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ್ರು.

Related Articles

Leave a Reply

Your email address will not be published. Required fields are marked *

Back to top button