ಸ್ಥಳೀಯ ಸುದ್ದಿಹುಬ್ಬಳ್ಳಿ

ಅನಕ್ಷರಸ್ಥರ ಬದುಕಲ್ಲಿ ಅಕ್ಷರ ದೀಪ ಬೆಳಗಿಸಿ: ಎಸ್ ಅಶೋಕ.

ಕರ್ನಾಟಕ ವಾರ್ತೆ: (ಹುಬ್ಬಳ್ಳಿ)ಡಿ.18: ಅಕ್ಷರ ವಿದ್ಯೆ ಬಲ್ಲವರು ಅನಕ್ಷರಸ್ಥರ ಬದುಕಲ್ಲಿ ಅಕ್ಷರ ದೀಪ ಬೆಳಗಿಸುವ ಕೆಲಸ ಮಾಡಬೇಕು ಎಂದು ಶಿಕ್ಷಣ ಅಧಿಕಾರಿ ಅಶೋಕ ಸಿಂಧಗಿ ಅಭಿಪ್ರಾಯ ಪಟ್ಟರು.

ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮ ಪಂಚಾಯತಿಯ ಅನಕ್ಷರಸ್ಥರನ್ನು ಗುರುತಿಸುವ ನಿಟ್ಟಿನಲ್ಲಿ. ಒಂದು ದಿನದ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಾಗಾರದ ಸಮೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಿರೇಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಸ್ಥಳಿಯ ಪ್ರಾಥಮಿಕ ಶಾಲಾ ಶಿಕ್ಷಕರು ಸರ್ವೆ‌ ಕಾರ್ಯ‌ ನಿರ್ವಹಿಸಬೇಕು.
ಧಾರವಾಡ ಜಿಲ್ಲೆಯಾದ್ಯಂತ ಶೇ.100‌% ರಷ್ಟು ಸಾಕ್ಷರತೆ ಸಾಧಿಸಲು ಎಲ್ಲರೂ ಶ್ರಮ ಪಡಬೇಕು. ಕಲಿಕಾರ್ಥಿಗಳ ಮನವೋಲಿಸಿ ಶ್ರದ್ಧೆ ಹಾಗೂ ನಿಷ್ಠೆಯಿಂದ ಕಲಿಸುವುದರೊಂದಿಗೆ ಅನಕ್ಷರಸ್ಥರ ಬಾಳಲ್ಲಿ ಅಕ್ಷರ ದೀಪ ಬೆಳಗಿಸಿ. ಸಾಕ್ಷರತಾ ಕೇಂದ್ರಗಳು ಉತ್ತಮವಾಗಿ ನಡೆಯಲಿ. ಸಂಘ ಸಂಸ್ಥೆಗಳು , ಜನಪ್ರತಿನಿಧಿಗಳು , ವಿದ್ಯಾವಂತ ವಿದಾರ್ಥಿಗಳು , ಸಾಕ್ಷರತಾ ಪ್ರೇರಕರು , ಮಹಿಳಾ ಸಂಘಗಳ ಸದಸ್ಯರ ಸಹಕಾರ ಪಡೆದು ಕಲಿಕಾ ಕೇಂದ್ರಗಳನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಿ. ಸಂಪೂರ್ಣ ಸಾಕ್ಷರತಾ ಗ್ರಾಮವಾಗಿ ಮಾಡಲು ಎಲ್ಲರೂ ಶ್ರಮಿಶೋಣ ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಶಿಕ್ಷಕ ಎಸ್.ಸಿ.ಶಾನವಾಡ ಸಮೀಕ್ಷೆ ಕಾರ್ಯಗಾರ ತರಬೇತಿ ನೀಡಿದರು . ಡಾ || ಲಿಂಗರಾಜ ರಾಮಾಪೂರ ಸ್ವಾಗತಿಸಿದರು . ದುರುಗೇಶ ಮಾದರ ಸಿಆರ್‌ಪಿ ವಂದನಾರ್ಪಣೆ ಮಾಡಿದರು .

ಮುಖ್ಯ ಶಿಕ್ಷಕಿ ಸುಮನ್ ತೇಲಂಗ್, ಶಿಕ್ಷಣ ಸಂಯೋಜಕ ಆರ್.ಬಿ ಪಾಟೀಲ , ಅರ್. ಎ.ವಿಜಾಪೂರ , ಜೆ.ಎಸ್.ಯಾವಗಲ್ಲ , ಬಿ.ಎನ್.ದಾಸ್ ,ಅರ್.ಜೆ.ಹೊಂಬಳ ,ಎ.ವಾಯ್ , ದಾಟನಾಳ, ಮಂಗಳಾ, ಜಯಶ್ರೀ.ಎಮ್ , ಎಸ್.ಬಿ .ಪೂಜಾರ ತರಬೇತಿ ಪಡೆದರು.

Related Articles

Leave a Reply

Your email address will not be published. Required fields are marked *

Back to top button