ಅನೈತಿಕ ಸಂಬಂಧಕ್ಕೆ ಪತಿಗೆ ಯಮಲೋಕ ತೋರಿದ ಸತಿ ಹಾಗೂ ಪ್ರೀಯಕರ
ಧಾರವಾಡ
ಧಾರವಾಡ ಜಿಲ್ಲೆ ಒಂದು ವಿಚಿತ್ರ ಅನೈತಿಕ ಸಂಬಂಧಕ್ಕೆ ಸಾಕ್ಷಿಯಾಗಿದೆ.
ತನ್ನ ಪ್ರೀಯಕರನಿಗೆ ಪತಿರಾಯ ಅಡ್ಡ ಬರ್ತಾನೆ ಎನ್ನುವ ದುರಾಲೋಚನೆಯಲ್ಲಿದ್ದ ಸತಿಯೊಬ್ಬಳು ಪತಿಗೆ ಚೆಟ್ಟ ಕಟ್ಟಿದ್ದಾಳೆ.ಇದಕ್ಕೆ ಪ್ರೀಯಕರ ಧಾರವಾಡ ಮೂಲದ ಗೋಪಾಲ ಹಾಗೂ ಅಪ್ರಾಪ್ತ ವಯಸ್ಸಿನ ಮಗ ಸಾಥ್ ಕೊಟ್ಟಿದ್ದು, ಕಂಬಿ ಹಿಂದಿ ಬಿದಿದ್ದಾರೆ.
ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ಇಂತಹ ಒಂದು ಬೆಚ್ಚಿ ಬಿಳಿಸುವ ಘಟನೆ ನಡೆದಿದೆ.
ಗ್ರಾಮದ ಯಲ್ಲಪ್ಪ ಹಗೆದಾರ ಹಾಗೂ ಸರಸ್ವತಿ ಹಗೆದಾರ ದಂಪತಿಗಳ ಮಧ್ಯೆ ವಿಲನ್ ಎಂಟ್ರಿ ಹೊಡೆದಿದ್ದೆ ಇದಕ್ಕೆಲ್ಲಾ ಕಾರಣವಾಗಿದೆ.
ಊರಿನಿಂದ ಮಿಸ್ಸಿಂಗ್ ಆಗಿದ್ದವನ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದ್ರೆ ಹೀಗೆ ಮಿಸ್ಸಿಂಗ್ ಆದವ ಹೆಣವಾಗಿ ಪತ್ತೆಯಾಗಿದ್ದು ಮಾತ್ರ ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ.
ಕೊಲೆಮಾಡಿ ಸಾಕ್ಷಿ ನಾಶ ಮಾಡಿದ್ರೆ ಸಾಕು ಎನ್ನುವ ಆವೇಶದಲ್ಲಿ ಗಂಡ ಯಲ್ಲಪನ್ನನ್ನು ಕೈಕಾಲು ಕಟ್ಟಿ ಹಾಕಿ ಬೈಲಹೊಂಗಲದ ಸಮೀಪದ ಮಲಪ್ರಭಾ ನದಿಯಲ್ಲಿ ಎಸೆದು ಹಂತಕರು ಪರಾರಿಯಾಗಿದ್ದರು. ಈ ಕೃತ್ಯಕ್ಕೆ ಸರಸ್ವತಿಯು ಅಪ್ರಾಪ್ತ ಮಗನನ್ನು ಬಳಸಿಕೊಂಡು ತನ್ನ ಜೋತೆಗೆ ಆತನಿಗೂ ಹಂತಕನ ಪಟ್ಟ ಕಟ್ಟಿದ್ದಾಳೆ.
ಮಾಡಿದುಣ್ಣೋ ಮಾರಾಯಾ ಎನ್ನುವಂತೆ ಕೊಲೆ ಮಾಡಿದ 3. ಮಂದಿ ಆರೋಪಿಗಳಾದ ಮಗ, ಸರಸ್ವತಿ ಹಾಗೂ ಗೋಪಾಲ್ ಅರೆಸ್ಟ್ ಆಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ.