ಸ್ಥಳೀಯ ಸುದ್ದಿ
ಅಪ್ಪು ಹಾದಿಯಲ್ಲೇ ಸಾವಿನಲ್ಲೂ ಸಾರ್ಥಕತೆ ಮೆರೆದ ಅಜ್ಜಿ
ಧಾರವಾಡ
ಧಾರವಾಡದ ರಾಮನಗರದ 90 ವರ್ಷದ ಅಜ್ಜಿ ಸಾವಿನ ಬಳಿಕವೂ ಅಪ್ಪುವಿನಂತೆ ಸಾರ್ಥಕತೆ ಮೆರೆದಿದ್ದಾರೆ.
ಫಕ್ಕೀರವ್ವಾ ಶಂಕ್ರಪ್ಪ ಮಲ್ಲಿಗವಾಡ ಅವರು 90 ವರ್ಷದವರಾಗಿದ್ದು, ಅನಾರೋಗ್ಯದಿಂದ ನಿಧನ ಹೊಂದಿದ್ದರು.
ಪುನೀತ್ ಅವರ ಕಣ್ಣು ದಾನ ಮಾಡಿದನ್ನು ಸ್ಮರಿಸಿಕೊಂಡಿದ್ದ ಅಜ್ಜಿ ತಾನು ಕೂಡ ಮರಣಹೊಂದಿದ ಬಳಿಕ ಕಣ್ಣು ದಾನ ಮಾಡುವುದಾಗಿ ಹೇಳಿದ್ದರು. ಅದರಂತೆ ನೊಂದಣಿಯನ್ನು ಸಹ ಮಾಡಿಸಿದ್ದರು.
ಇಂದು ಎಸಡಿಎಂ ಆಸ್ಪತ್ರೆ ವೈದ್ಯರು ಮೃತಳ ಮನೆಗೆ ಬಂದು ನೇತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ.