ಅಮೀತ ಶಾ ಸದ್ಗುರು ಸಿದ್ಧಾರೂಢರ ಜೀವನಾಧಾರಿತ ಪುಸ್ತಕ ಉಡುಗೋರೆ ಕೊಟ್ಟ ಮೇಯರ್ ಅಂಚಟಗೇರಿ
ಧಾರವಾಡ
ಹುಬ್ಬಳ್ಳಿಗೆ ನಿನ್ನೆ ರಾತ್ರಿ ಆಗಮಿಸಿದ ಕೇಂದ್ರ ಗೃಹ ಸಚಿವ ಅಮೀತ ಶಾ ಅವರನ್ನು ವಿಮಾನ ನಿಲ್ದಾಣದಲ್ಲಿ ರಾಜ್ಯದ ಸಿಎಂ, ಗೃಹ ಸಚಿವ ಸೇರಿದಂತೆ, ಕ್ಯಾಬಿನೇಟ ಮಂತ್ರಿಗಳು ಹಾಗೂ ಕೇಂದ್ರ ಸಚಿವರು ಸನ್ಮಾನಿಸಿ ಗೌರವಿಸಿದ್ರು.
ಧಾರವಾಡದಲ್ಲಿ ಭಾರತ ಸರ್ಕಾರದಿಂದ ಅನುಮೋದನೆಗೊಂಡ ವಿಧಿ ವಿಜ್ಞಾನ ವಿಶ್ವವಿದ್ಯಾಲಯ (ಫಾರೆನ್ಸಿಕ್ ಸೈನ್ಸ್ ಯೂನಿವರ್ಸಿಟಿ ) ದ ಕಟ್ಟಡದ ಶಂಕು ಸ್ಥಾಪನೆಯನ್ನು ನೆರವೇರಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಮಂತ್ರಿಗಳಾದ ಅಮಿತ್ ಶಾ ರವರನ್ನು ರಾಜ್ಯದ ನಾಯಕರುಗಳು ಸ್ವಾಗತ ಕೋರಿದ್ರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಬೊಮ್ಮಾಯಿ,ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ , ಶಾಸಕರಾದ ಅರವಿಂದ ಬೆಲ್ಲದ , ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ , ರವರು ಕೇಸರಿ ಶಾಲನ್ನು ಹೊದಿಸಿ, ಸನ್ಮಾನಿಸಿದ್ರು.
ಇದೇ ಸಂದರ್ಭದಲ್ಲಿ ಮೇಯರ್ ಅಂಚಟಗೇರಿ ಅವರು, ಅಮೀತ ಶಾ ಅವರಿಗೆ ಸದ್ಗುರು ಸಿದ್ಧಾರೂಢರ ಜೀವನಾಧಾರಿತ ಪುಸ್ತಕವನ್ನು ನೀಡುವ ಮೂಲಕ ಹಾರ್ದಿಕವಾಗಿ ಸ್ವಾಗತಿಸಿದರು.