ಸ್ಥಳೀಯ ಸುದ್ದಿ

ಅರಣ್ಯ ಇಲಾಖೆಗೆ ಬೇಕಿದೆ ಪೊಲೀಸರ ಸಹಕಾರ

ಬೆಂಗಳೂರು

ಧಾರವಾಡ ಜಿಲ್ಲೆಯಲ್ಲಿ ಸ್ಥಳೀಯ ಭಾಷೆಯನ್ನು ಮಾತನಾಡುತ್ತಾ ಇರುವ 8 ಜನರ ಗ್ಯಾಂಗ್ ಒಂದು ಆಕ್ಟಿವ್ ಆಗಿ ನಿರಂತರವಾಗಿ ಗಂಧದ ಮರಗಳ್ಳತನ ಮಾಡುತ್ತಲೇ ಇದೆ. ಆದ್ರೆ ಇನ್ನುವರೆಗೂ ಆರೋಪಿಗಳ ಬಂಧನವಾಗಿಲ್ಲಾ.

2 ವರ್ಷಗಳಿಂದ ಜಿಲ್ಲೆಯಲ್ಲಿ ಗಂಧದ ಮರಗಳನ್ನು ಸಂರಕ್ಷಣೆ ಮಾಡಿಕೊಂಡು ಬಂದಿದ್ದ ಅರಣ್ಯ ಇಲಾಕೆ ಅಧಿಕಾರಿಗಳಿಗೆ ಈ ಗ್ಯಾಂಗನಿಂದ ತಲೆ ಬಿಸಿ ಹೆಚ್ಚಾಗಿದೆ.

ಮೊದಲು ಜಿಲ್ಲಾಧಿಕಾರಿ ಮನೆ ಆವರಣದಲ್ಲಿ ‌ಗಂಧದ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ‌ ಆರೋಪಿಗಳ ಪೈಕಿ ಕೆವಲ ಒಬ್ಬ‌ ಆರೋಪಿ ಬಂಧನವಾಗಿದ್ದು, ಇನ್ನುಳಿದ ಇಬ್ನರು ಆರೋಪಿಗಳು ಬಂಧನವಾಗದೇ ತಲೆಮರೆಸಿಕೊಂಡಿದ್ದರು. ನಂತರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಇವರೆಲ್ಲಾ ನವಲಗುಂದ ತಾಲೂಕಿನ ತಿರ್ಲಾಪೂರ ಊರಿನವರಾಗಿದ್ದಾರೆ.

8 ಜನರ ಗ್ಯಾಂಗ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೆ ಆವರಣದಲ್ಲಿ, ಎಸಿ ಮನೆ ಆವರಣದಲ್ಲಿ, ಕೆಸಿಡಿ ಕಾಲೇಜು ಆಚರಣದಲ್ಲಿ, ಹಾಗೂ ಸಿಇಓ ಮನೆ ಆವರಣದಲ್ಲಿ ಗಂಧದ ಮರ ಕಡಿದುಕೊಂಡು ಹೊತ್ತುಕೊಂಡು ಹೋಗಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಉಪ್ಪಾರ ಅವರು ಮಾತನಾಡಿದ್ದಾರೆ ಕೇಳಿ…

(ಪ್ರಕರಣ ದಾಖಲಾದಾಗ ಮಾತನಾಡಿದ್ದ ಅರಣ್ಯಾಧಿಕಾರಿ ಉಪ್ಪಾರ)

ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಗಂಧದ ಚೋರರ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಹುಡುಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.

ಜಿಲ್ಲಾಧಿಕಾರಿ ಮನೆ ಆವರಣದಲ್ಲಿಯೇ ಈ ರೀತಿ ಗಂಧದ ಮರಗಳ್ಳತನ ನಡೆದ್ರೆ, ಉಳಿದಂತೆ ಅರಣ್ಯ ಪ್ರದೇಶದಲ್ಲಿ ಇರುವ ಗಂಧದ ಮರಗಳು ಸುರಕ್ಷಿತವಾಗಿ ಇರ್ತಾವಾ? ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಹುಟ್ಟಿದೆ.

ಜಿಲ್ಲೆಯಲ್ಲಿ ಗಂಧದಚೋರರ ಹಾವಳಿ ತಪ್ಪಿಸಲು ಅರಣ್ಯ‌ಇಲಾಖೆ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಸಾಥ್ ನೀಡಬೇಕಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ವಿಶೇಷ ಟಾಸ್ಕ ಫೊರ್ಸ ಸಮಿತಿ ರಚನೆ ಮಾಡುತ್ತಾರಾ? ನೋಡಬೇಕಿದೆ.

ಪವರ್ ಸಿಟಿ‌ನ್ಯೂಸ್ ಕನ್ನಡ
ಸತ್ಯ ಸದಾಕಾಲ

Related Articles

Leave a Reply

Your email address will not be published. Required fields are marked *

Back to top button