ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಅವಳಿ ನಗರದಲ್ಲಿ ಭೀಮಾ ತೀರದ ಕೊರೆಗಾಂವ್ ವಿಜಯೋತ್ಸವ!

ಹುಬ್ಬಳ್ಳಿಯಲ್ಲಿ ದಲಿತಪರ ಮುಖಂಡರಿಂದ ಭೀಮಾ ತೀರದ ಕೊರೆಗಾಂವ್ ವಿಜಯೋತ್ಸವ-ದಿವಸ್ ಆಚರಣೆಯಲ್ಲಿ

ಆರ್ಯ,ಬ್ರಾಹ್ಮಣ
*ಹಠಾವೋ ದೇಶ ಬಚಾವೋ* ಘೋಷಣೆಗಳೊಂದಿಗೆ
ಮಹಾರಾಷ್ಟ್ರದಲ್ಲಿನ ಭೀಮಾ ತೀರದ ಕೊರೆಗಾಂವ ನಲ್ಲಿ ನಡೆದ  ಶೋಷಣೆ, ಅಸ್ಪೃಶ್ಯತೆ ಮತ್ತು ಮೇಲು,ಕೀಳು ಗಳ ದೌರ್ಜನ್ಯ ಖಂಡಿಸಿ ಶೊ಼ಷಿತರಪರ 500 ಮಹರ್ ಮತ್ತು 30000  ಪೇಶ್ವೆ ಸೈನಿಕರ ಮಧ್ಯ 01-01-1818 ರಲ್ಲಿ ನಡೆದ 9 ತಾಸುಗಳ ಯುದ್ಧದಲ್ಲಿ ವಿಜಯ ಸಾಧಿಸಿದ   ದಲಿತಪರ ಮಹರ್ ಸೈನಿಕರು ಪೇಶ್ವೆ ಆಡಳಿತದಲ್ಲಿ ನಡೆಯುತ್ತಿದ್ದ ಅನ್ಯಾಯ, ಮೇಲೂ, ಕೀಳುಗಳ ವಿರುಧ್ದ ವಿಜಯಸಾದಿಸಿದ ಹಿನ್ನೆಲೆಯಲ್ಲಿ.

(File)

ಡಾ! ಬಿ ಅರ್ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗುರುನಾಥ ಉಳ್ಳಿಕಾಸಿ ನೇತೃತ್ವದಲ್ಲಿ ನಡೆದ ವಿಜಯೋತ್ಸವ ದಿವಸ್ ಆಚರಣೆ ಯನ್ನು ಕರ್ನಾಟಕ ಸಮತಾ ಸೇನಾ ಸಂಘಟನೆಯ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಪ.ಜಾ/ಪ.ಪಂಗಡದ ಪ್ರಮುಖರು,ಪ್ರಗತಿಪರರು,ಹಿಂದುಳಿದವರ್ಗ /ಅಲ್ಪ ಸಂಖ್ಯಾತ ಸಮಾಜದ ಪ್ರಮುಖರು  ಭಾಗವಹಿಸುವ  ಮೂಲಕ ಹಿರಿಯ ನಾಯಕ ಆಯುಷ್ಮಾನ ಪಿತಾಂಬ್ರಪ್ಪ ಬಿಳಾರ ರವರ  ಹುಟ್ಟು ಹಬ್ಬವನ್ನು ಸಹ ಆಚರಿಸಲಾಯಿತು.

ಧಾರವಾಡದ ಲಕ್ಷ್ಮಣ ಬಕ್ಕಾಯಿ, ಸಮತಾ ಸೈನಿಕ ದಳದ ಶಂಕರ ಅಜಮನಿ,
1) ಸಮತಾಸೇನಾ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳ(ರಿ) ,

2) ಸಮಗಾರ ಹರಳಯ್ಯ ಸಮಾಜ ಅಭಿವೃದ್ದಿ ಮಹಾಮಂಡಳ (ರಿ)ಯ ಗುರುನಾಥ -ಉಳ್ಳಿಕಾಶಿ,
ಮಲ್ಲಿಕಾರ್ಜುನ ಬಿಳಾರ,ಗಂಗಾಧರ ಪೆರೂರ,

3) ಲಿಡಕರ್ ಸಂಘಟನೆಯ ಲೋಹಿತ ಗಾಮನಗಟ್ಟಿ, ಹಾಶ್ಯಂ ಮುಲ್ಲಾ,ದೇವಣ್ಣ ಇಟಗಿ,ಕಿರಣ ಗಾಮನಗಟ್ಟಿ,ಲಕ್ಷ್ಮಣ ಮಂಚಲಾಪುರ,ಮಂಜುಳಾ ಬೆಣಗಿ,ಇಝಾಜ ಉಪ್ಪಿನ,ಬಾಷಾ ಮಾಸನೂರ,ರೈಸ ಖೋಜೆ,ರವಿ ಹನುಮಸಾಗರ,ಗುರು ಕ್ವಾಟಿ,ಗಂಗಾಧರ ಗಬ್ಬೂರ,ಮಹಿಳಾ ಪ್ರಮುಖರಾದ ನಿರ್ಮಲಾ ಮಾನೆ,ಮಂಜುಳಾ ಬೆಣಗಿ,

ಲಿಡಕರ ಚರ್ಮಕುಟೀರಕಾರರು ಮತ್ತು ಪ್ರಗತಿಪರ,ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ವಿವರ ವನ್ನ ಸಂವಿಧಾನ ಶಿಲ್ಪಿ ಹೇಗೆ ” *ಬ್ಯಾಟಲ್ ಆಫ ಕೊರೆಗಾಂವ್”* ರಚಿಸುವ ಮೂಲಕ ವಿಶ್ವಕ್ಕೆ ತಿಳಿಸಿದ ಕುರಿತು ಲಕ್ಷಣ ಬಕ್ಕಾಯಿ ವಿವರವಾಗಿ ಮಾತನಾಡಿದರು.

*ಶಂಕರ ಅಜಮನಿ* (ಸಮತಾ ಸೈನಿಕ ದಳ)ದ  ರವರು ಮಾತನಾಡಿ ಆರ್ಯರ ದೇಶವಿದಲ್ಲ ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದು ನಮ್ಮ ಮೇಲೆ  ಮತಾಂತರ ಹಾಗೂ ಆಹಾರ ಪದ್ದತಿಯ ದಬ್ಬಾಳಿಕೆ ನಡೆಸಬೇಡಿ,ಅದಕ್ಕೆ ನಾವು ಬಗ್ಗಲ್ಲ,ನೀವು ಈ ದೇಶಕ್ಕೆ ವಲಸೆಬಂದವರೇ ಹೊರತು ನಾವು ನಿಮ್ಮಲ್ಲಿಗೆ ಬಂದವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

*ರತ್ನಾಬಾಯಿ ಗಬ್ಬೂರ*
ರವರು ಮಾತನಾಡಿ ಇತಿಹಾಸವನ್ನರಿತು ನಾವೆಲ್ಲರೂ ಪ್ರತಿ ಕ್ಷೇತ್ರದಲ್ಲೂ ಶಿಕ್ಷಣ ಪಡೆದು ಮುಂದೆ ಸಾಗಬೇಕು  ಎಂದರು.

*ಮಲ್ಲಿಕಾರ್ಜುನ ಬಿಳಾರ*
ಮಾತನಾಡಿ ಸದರಿ ಕಾರ್ಯಕ್ರಮದಲ್ಲಿ ಎಲ್ಲ ಸಮಾಜದ ಪ್ರಮುಕರು ಏಕತೆಯಿಂದ ಸೇರಿದ್ದು ಸಂತಸ ತಂದಿದೆ ಇದು ಬಾಬಾಸಾಹೇಬರ ಕನಸಾಗಿತ್ತು ಮತ್ತು ದಲಿತ ಪರ ನಮ್ಮ ನೆಚ್ಚಿನ ನಾಯಕ ದಿ. ಪಿತಾಂಬ್ರಪ್ಪ ಬಿಳಾರ ರವರ ಆಶಯವಾಗಿತ್ತು ಎಂದು ತಿಳಿಸಿದರು.

*ಗುರುನಾಥ ಉಳ್ಳಿಕಾಸಿ* ಕಾರ್ಯಕ್ರಮ ನಿರೂಪಿಸಿ ಮಾತನಾಡಿ ಈ ಮಹತ್ತರ ದಿನವನ್ನ ದಲಿತರು ಆಚರಿಸಿದಾಗ ಹಲವು ಮೇಲ್ವರ್ಗದವರು ಕೀಳು ಮಟ್ಟದ  ಅಭಿಪ್ರಾಯ ಗಳು – ಮತಾಂತರ ದಂತಹ  ಸಲ್ಲದ  ವಿದ್ರೋಹದ ವಾಕ್ಯ ಗಳನ್ನೂ ಸಮಾಜದಲ್ಲಿ ಹರಿಬಿಡುವ ಮೂಲಕ  ದೌರ್ಜನ್ಯ ವೆಸಗುವ ಮೆಲ್ವರ್ಗದವರು ನಡೆಸುವ ಹುನ್ನಾರ ಅನ್ಯಾಯದ ಪರಮಾವಧಿಯಾಗಿದೆ,ನಹೀಗಾಗಿ ಇ ಕೊರೆಗಾಂವ್ ವಿಜಯೋತ್ಸವ ದಿವಸ್ ವಿಶ್ವ ಮರೆಮಾಚದಂತೆ ಇತಿಹಾಸವನ್ನ  ನೆನಪಿಸಿ ಸ್ವಾಭಿಮಾನವನ್ನ ಹೇಳಿಕೊಟ್ಟ ಮಹಾನಾಯಕ ಡಾ:ಬಾಬಾಸಾಹೇಬರಿಗೆ ಗೌರವ ಸಲ್ಲಿಸಲು ಈ  ನೂತನ ವರ್ಷದ ಮೊದಲ ದಿನವನ್ನ ಭೀಮಾ ಕೋರೆಗಾಂವ್ ನ ವಿಜಯೋತ್ಸವ ದಿನವನ್ನಾಗಿ ಹೆಮ್ಮೆಯಿಂದ ಆಚರಿಸುತ್ತೇವೆಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಲೋಹಿತ ಗಾಮನಗಟ್ಟಿ ರವರು ವಂದನಾರ್ಪಣೆ ಮಾಡಿದರು.
ನಂತರ ಸಭೆಯಲ್ಲಿ

ಜೈ ಭೀಮ್ ಘೋಷಣೆಯೊಂದಿಗೆ ಮೂಲ ನಿವಾಸಿ ಜಿಂದಾಬಾದ್ ಎಂದು ವಿಜಯೋತ್ಸವ ಆಚರಿಸಿದರು.

Related Articles

Leave a Reply

Your email address will not be published. Required fields are marked *

Back to top button