ಬೆಂಗಳೂರುರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಇಂದಿನಿಂದ ಕೆ ಜಿ ಎಫ್ -2 ಚೀತ್ರದ online ticket booking start !

ಹುಬ್ಬಳ್ಳಿ: ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್‌ ನ ಸಂಜಯದತ್ ಮತ್ತು ನಟಿ ರವೀನಾ ಟಂಡನ್ ಒಳಗೊಂಡಂತೆ ಭಾರಿ ಸ್ಟಾರ್ ಕಾಸ್ಟ್ ಹೊಂದಿರುವ ಕೆಜಿಎಫ್ 2- ಚೀತ್ರ ತೆರೆಗೆ ಬರಲು ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಚಿತ್ರ ಸೃಷ್ಟಿ ಮಾಡಿರುವ ಹವಾ ನೋಡಿದರೆ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಲಕ್ಷಣಗಳು ಗೋಚರಿಸುತ್ತಿವೆ.

ಕೆಜಿಎಫ್‌: ಚಾಪ್ಟರ್‌ 1’ಕೂಡ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಈಗ ಎರಡನೇ ಚಾಪ್ಟರ್‌ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಕೆ ಜಿ ಎಫ್ ಚೀತ್ರ ತಂಡವು ಕೆ ಜಿ ಎಫ್ 2 ನ ಟ್ರೇಲರ್‌ ಬಿಡುಗಡೆಗೆ ಮಾಡಿರುವ ಹೊಸ ಪ್ರಯತ್ನದ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಲು ಕಾರಣ ವಾಗಿದೆ.

ಭಾನುವಾರದಿಂದ (ಮಾರ್ಚ್‌ 10) ಕರ್ನಾಟಕದಲ್ಲಿ ಆರಂಭ ಗೊಳ್ಳುವ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಅಭಿಮಾನಿಗಳು ಸಿನಿಮಾ ಟಿಕೆಟ್‌ ಕಾಯ್ದಿರಿಸೋಕೆ ಕಾದು ಕೂತಿದ್ದಾರೆ.

ಕೆಜಿಎಫ್‌: ಚಾಪ್ಟರ್‌ 2‘ ಕನ್ನಡ ಮಾತ್ರವಲ್ಲದೆ, ಹಿಂದಿ,ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ತೆರೆಗೆ ಬರುತ್ತಿದೆ. ಹಿಂದಿ ಚಿತ್ರರಂಗದಿಂದ ಸಿನಿಮಾಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಚಿತ್ರತಂಡದವರು ಹಿಂದಿಯಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ, ಬಾಲಿವುಡ್‌ ಅಂಗಳದಿಂದ ಕೂಡಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ.

ಪವರ್ ಸಿಟಿ ನ್ಯೂಸ್

Related Articles

Leave a Reply

Your email address will not be published. Required fields are marked *

Back to top button