ಸ್ಥಳೀಯ ಸುದ್ದಿ

ಉಚಿತ ಹೋಮಿಯೋಪತಿ ಚಿಕೆತ್ಸೆಗೆ ಚಾಲನೆ

ಧಾರವಾಡ

ಧಾರವಾಡದ ಮಹಾತ್ಮಾ ಬಸವೇಶ್ವರ ನಗರದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ರವರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ರವರ ಅಭಿಮಾನಿ ಬಳಗದಿಂದ ಉಚಿತ ಹೊಮಿಯೋಪತಿ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ವಿಶೇಷ ಕಾರ್ಯಕ್ರಮವನ್ನು ಕರ್ನಾಟಕ ಬಯಲು ಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಮತ್ತು ಎಸ್ ಆರ್ ರಾಮನಗೌಡರ ಹಾಗೂ ಶೇಖರ ಕವಳಿ ಮತ್ತು ಶ್ರೀಕಾಂತ ಕ್ಯಾತಪ್ಪನವರ ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿದ್ರು.

ಈ ಕಾರ್ಯಕ್ರಮದಲ್ಲಿ ಉಚಿತ ಚಿಕಿತ್ಸೆ ನೀಡಲು ಬಂದ ವೈದ್ಯರುಗಳಾದ ಶ್ರೀಕಾಂತ ಮೀರಜಕರ, ಸುಕ್ರತ ಶೆಟ್ಟರ ಬಸವರಾಜ ಅಂಗಡಿ ಮತ್ತು ಅವರ ವೈದ್ಯ ತಂಡಕ್ಕೆ ಸನ್ನಾನಿಸಿರು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತವನಪ್ಪ ಅಷ್ಪಗಿ ಹಾಗೂ ಮಹಾಪೌರರು ಈರೇಶ ಅಂಚಟಗೇರಿ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ರೀತಿಯ ಚಿಕಿತ್ಸಾ ಪದ್ಧತಿಗಳಿವೆ.

ಅವುಗಳಲ್ಲಿ ಹೊಮಿಯೋಪತಿ ಚಿಕಿತ್ಸೆಯೂ ಸಹ ಪ್ರಸಿದ್ಧ ಪದ್ಧತಿಯಾಗಿದೆ.

ಇತಿಹಾಸ ಕಾಲದಿಂದಲೂ ಅನುಸರಿಕೊಂಡು ಬಂದ ಈ ಚಿಕಿತ್ಸಾ ಪದ್ಧತಿಯನ್ನು ಇಂದು ಶ್ರೀ ಶ್ರೀಕಾಂತ ಕ್ಯಾತಪ್ಪನವರ ಶೇಖರ ಕವಳಿ ಮನೊಹರ ನಾಯಕ ರವರು ಉಚಿತವಾಗಿ ನಾಗರಿಕರಿಗೆ ಈ ಸೇವೆಯನ್ನ ಮುಟ್ಟಿಸುವ ಕಾರ್ಯವನ್ನು ಮಾಡುತ್ತಿರುವದು ಒಳ್ಳೇಯ ಕಾರ್ಯ ಅವರಿಗೆ ಅಭಿನಂದನೆ ಸಲ್ಲಿಬೇಕು ಎಂದರು.

ಖ್ಯಾತ ವೈದ್ಯರಾದ ಡಾ. ಎಸ್.ಆರ್. ರಾಮನಗೌಡರ ರವರು, ಡಾ. ಸುಕೃತ ಶೆಟ್ಟರ ರವರು, ಶ್ರೀ ಸಿ.ಎಸ್. ಪಾಟೀಲ ರವರು, ಶ್ರೀ ಅಶೋಕ ಶೆಟ್ಟರ ರವರು, ಶ್ರೀ ಶಂಕರ ಪರೀಟ ರವರು, ಶ್ರೀ ಸಂಜು ಹೊಸಕೋಟಿ ರವರು, ಶ್ರೀ ಹರೀಶ ಮಾನೆ ರವರು, ಈ ಸಂದರ್ಭದಲ್ಲಿ ಮನೊಹರ ನಾಯಕ, ಶಂಕರ ಪರಿಟ್ ಸಂಗು ಹನಸಿ , ಪಕ್ಕಿರಗೌಡ ಎಪ್ ಪಾಟೀಲ್, ವೀಣಾ ತುಪ್ಪದ

ಹಾಗೂ ಮಹಾತ್ಮಾ ಬಸವೇಶ್ವರ ನಗರ, ಗುಲಗಂಜಿಕೊಪ್ಪ, ಕೊಪ್ಪದಕೇರಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button