ಸ್ಥಳೀಯ ಸುದ್ದಿ

ಏಕಕಾಲಕ್ಕೆ 4-5 ಹಳ್ಳಿಗಳಲ್ಲಿ ‌ಪ್ರಚಾರ ನಡೆಸುತ್ತಿರುವ ನಾಯಕಿ

ಧಾರವಾಡ

ಇಂದು ಶ್ರೀಮತಿ ಶಿವಲೀಲಾ ಕುಲಕರ್ಣಿಯವರು,ಧಾರವಾಡ 71 ಗ್ರಾಮೀಣ ಕ್ವೇತ್ರದ ವ್ಯಾಪ್ತಿಗೆ ಬರುವ ಮಂಗಳಗಟ್ಟಿ,ಕುರುಬಗಟ್ಟಿ,ಹಾಗೂ ಮುಳಮುತ್ತಲ ಗ್ರಾಮಗಳಲ್ಲಿ ಸಂಚರಿಸಿ ವಿನಯ ಕುಲಕರ್ಣಿಯವರ ಪರವಾಗಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಶಿವಲೀಲಾ ಕುಲಕರ್ಣಿಯವರು,ಮಾತನಾಡಿ…. ವಿದ್ಯಾಕಾಶಿ ಧಾರವಾಡದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯಗಳು ತಲೆ ಎತ್ತಿ ನಿಂತಿವೆ. ಕಳೆದ 10 ವರ್ಷಗಳಿಂದ ವಿದ್ಯಾಕಾಶಿ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿತ್ತು.

ಯಾವಾಗ ವಿನಯ್ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾದರೋ ಆವಾಗ ಧಾರವಾಡದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸಿದರು. ಧಾರವಾಡ ಗ್ರಾಮೀಣ ಕ್ಷೇತ್ರ ಹಳ್ಳಿಗಳಿಂದ ಕೂಡಿದ ಕ್ಷೇತ್ರ. ಹಳ್ಳಿಗಳಲ್ಲಿ ಪ್ರಜ್ಞಾವಂತ ಹಾಗೂ ವಿದ್ಯಾವಂತ ವಿದ್ಯಾರ್ಥಿಗಳಿದ್ದಾರೆ. ಅವರ ಶೈಕ್ಷಣಿಕ ಜೀವನ ಬದಲಿಸುವುದಕ್ಕೋಸ್ಕರವೇ ವಿನಯ್ ಕುಲಕರ್ಣಿ ಅವರು ವೈಶುದೀಪ ಫೌಂಡೇಶನ್ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಲಿಕಾ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರರಾಗಿದ್ದರು.

ಸತತವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದೆ ಬಿದ್ದಿದ್ದ ಧಾರವಾಡ ಜಿಲ್ಲೆಯನ್ನು ಟಾಪ್ ಹತ್ತರ ಸ್ಥಾನದಲ್ಲಿ ಬರುವಂತೆ ಮಾಡಿದವರೇ ವಿನಯ್ ಕುಲಕರ್ಣಿ ಅವರು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅನೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿ ಕೂಡ ಆದವರು ವಿನಯ್ ಕುಲಕರ್ಣಿ. ವಿಶೇಷವಾಗಿ ಗ್ರಾಮಾಂತರ ಭಾಗದ ಹಿಂದುಳಿದ ಹಳ್ಳಿಗಳ ಶೈಕ್ಷಣಿಕ ಪ್ರಗತಿಗಾಗಿ ಒತ್ತು ಕೊಟ್ಟು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಒತ್ತುಕೊಟ್ಟು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.

ಧಾರವಾಡಕ್ಕೆ ಐಐಟಿ ಬರಲು ಮೂಲ ಕಾರಣ ಆದವರೇ ವಿನಯ್ ಕುಲಕರ್ಣಿ. ಅವರು ಸಚಿವರಿದ್ದ ಸಮಯದಲ್ಲಿ ಧಾರವಾಡದಲ್ಲಿ ಭೂಮಿ ಮಂಜೂರು ಮಾಡಿಸಿ ಅಲ್ಲಿಯೇ ಐಐಟಿ ಕೇಂದ್ರ ಸ್ಥಾಪನೆಯಾಗುವಂತೆ ಮಾಡಿದರು. ಆದರೆ, ಅದರ ಲಾಭವನ್ನು ಈಗ ಬಿಜೆಪಿಯವರು ಪಡೆದುಕೊಂಡಿದ್ದಾರೆ

ಆತ್ಮೀಯ ಮತದಾರ ಬಾಂಧವರೇ ಶೈಕ್ಷಣಿಕ ಕ್ಷೇತ್ರಕ್ಕೆ ಅನೇಕ ಉಡುಗೊರೆಗಳನ್ನು ಕೊಟ್ಟ ವಿನಯ್ ಅವರಿಗೆ ಈ ಬಾರಿ ಬೆಂಬಲ ನೀಡಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಈಶ್ವರ ಶಿವಳ್ಳಿ,ವೈಶಾಲಿ ಕುಲಕರ್ಣಿ,ದ್ಯಾವನಗೌಡ ಪಾಟೀಲ,ಶಿವನಗೌಡ ಪಾಟೀಲ, ರಘುರಾಮ ಮೇದಾರ,ಗಂಗಪ್ಪ ಸರದಾರ,ತಮ್ಮಣ್ಣ ಗುಮಮಡಗೋವಿ,ಮಕ್ತುಮಸಾಬ ಬಿಜಾಪುರ, ದಾನಪ್ಪ ಗುಂಡಗೋವಿ,ಬಸವರಾಜ ವಕ್ಕುಂದ,ಚನ್ನಪ್ಪ ಬ್ಯಾಳಿ,ಮಾರುತಿ ಯಲಿಗಾರ,ಮಲ್ಲಯ್ಯ ಚರಂತಿಮಠ,ಪತ್ರೆಪ್ಪ ನಂದೆಪ್ಪನವರ,

Related Articles

Leave a Reply

Your email address will not be published. Required fields are marked *

Back to top button