ಆರ್ಥಿಕತೆಕೃಷಿಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ
ಕಡಲೆಗೆ ಕೀಟನಾಶಕ ಬೇಕೊ? ಟಾನಿಕ್ ಬೇಕೋ? ಜೆಡಿ ಸಾಹೇಬ್ರೇ…….ರೈತರಾದ ನೀವು ಕೃಷಿ ಸಂಪರ್ಕ ಕೇಂದ್ರದ ಮೇಲೆ ಅವಲಂಬನೆ ಆಗಬೇಡಿ ಎಂದ್ರೆ ಹೆಂಗರಿ ಸಾಹೇಬ್ರ……
ರೈತರು ಹಾಗೂ ಕೃಷಿ ಇಲಾಕೆ ಜಂಟಿ ನಿರ್ದೇಶಕರು ಮಾತನಾಡಿದ ಆಡಿಯೋ ವೈರಲ್.
ಎಲ್ಲೇಡೆ ಇದೀಗ ಚಳಿಗಾಲ ಶುರುವಾಗಿದೆ. ರೈತರು ಬೆಳೆದ ಕಡಲೆ ಬೆಳೆಗಳಿಗೆ ಕೀಟನಾಶಕದ ಅವಶ್ಯಕತೆ ಇದೆ. ಆದ್ರೆ ಜಿಲ್ಲೆಯ ಕೃಷಿ ಇಲಾಖೆ ಮುಂದೆ ಕಡಲೆಗೆ ಕೀಟನಾಶಕ ಕೊಡುವ ಬದಲು ರೈತರು ಟಾನಿಕ್ ಸಿಂಪಡಿಸಿ ಎಂದು ರೈತರಿಗೆ ಟಾನಿಕ್ ವಿತರಣೆ ಮಾಡಲು ಕೃಷಿ ಇಲಾಖೆ ಮುಂದಾಗಿದೆ. ರೈತರಾದ ನೀವು ಕೃಷಿ ಸಂಪರ್ಕ ಕೇಂದ್ರದ (ಆರ್.ಎಸ್.ಕೆ) ಮೇಲೆ ಅವಲಂಬನೆ ಆಗಬೇಡಿ ಎನ್ನುವ ಮಾತನ್ನು ಸ್ವಂತ: ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಾಜಶೇಖರ ಬಿಜಾಪೂರ ಹೇಳುತ್ತಿದ್ದಾರೆ.
ಆದ್ರೆ ಕೃಷಿ ಇಲಾಖೆ ಜಂಟಿನಿರ್ದೇಶಕರು ಕಡಲೆಗೆ ಕೀಟನಾಶಕದ ಪೂರೈಕೆ ಮಾಡಲು ಅನುದಾನದ ಕೊರತೆ ಇದೆ. ನೀವು ಅನುದಾನಕ್ಕಾಗಿ ಒಂದು ಲೇಟರ್ ಕೊಡಿ ನಾನು ಏನು ಮಾಡೊಕೆ ಆಗೊಲ್ಲಾ. ಈ ಬಗ್ಗೆ ನಾನು 1 ಕೋಟಿ ಅನುದಾನ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಜಂಟಿ ನಿರ್ದೇಶಕರು ಹೇಳುತ್ತಾರೆ.
ರೈತರು ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಜಟಾಪಟಿ ಆಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.