ಧಾರವಾಡ

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಇಂದು 21 ನಾಮಪತ್ರ ಸೇರಿ ಒಟ್ಟು 12 ಅಭ್ಯಥಿಗಳಿಂದ 24 ನಾಮಪತ್ರಗಳ ಸಲ್ಲಿಕೆ

ಧಾರವಾಡ

ಕರ್ನಾಟಕ ವಿಧಾನ ಪರಿಷತ್ ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು 12 ಜನ ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದ್ದು, ಇಲ್ಲಿಯವರೆಗೆ ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ನವೆಂಬರ್ 17 ರಂದು ಒಂದು ನಾಮಪತ್ರ, ನವೆಂಬರ್ 18 ರಂದು 2 ನಾಮಪತ್ರಗಳು ಮತ್ತು ಕೊನೆಯದಿನವಾದ (ಇಂದು) ನವೆಂಬರ್ 23ರಂದು 21 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಲ್ಲಿಯವರೆಗೆ ಒಟ್ಟು 12 ಅಭ್ಯರ್ಥಿಗಳಿಂದ 24 ನಾಮಪತ್ರಗಳು ಸಲ್ಲಿಕೆಯಾಗಿವೆ.
ಪಕ್ಷೇತರ ಅಭ್ಯರ್ಥಿಗಳಾದ ಈರಪ್ಪ ಬಸನಗೌಡ ಗುಬ್ಬೇರ, ನಾಗೇಶಪ್ಪ ಶಿವರುದ್ರಪ್ಪ ಪಡೆಪ್ಪನವರ, ಬಸವರಾಜ ಶಂಕ್ರಪ್ಪ ಕೊಟಗಿ, ಮಲ್ಲಿಕಾರ್ಜುನ ಚನ್ನಬಸಪ್ಪ ಹಾವೇರಿ, ಮಹೇಶ ಗಣೇಶಭಟ್ಟ ಜೋಶಿ, ಮಹೇಶ ಬಸೆಟ್ಟೆಪ್ಪ ಹೋಗೆಸೊಪ್ಪಿನ, ಮಂಜುನಾಥ ಗಣೇಶಪ್ಪ ಅಡ್ಮನಿ, ವೀರುಪಾಕ್ಷಗೌಡ ಗೌಡಪ್ಪಗೌಡ ಪಾಟೀಲ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಪ್ರಧೀಪ ಶಿವಪ್ಪ ಶೆಟ್ಟರ, ಜನತಾ ಪಾರ್ಟಿ ಅಭ್ಯರ್ಥಿಗಳಾದ ತಳವಾರ ಶಿವಕುಮಾರ ಮಹದೇವಪ್ಪ, ಫಕ್ಕೀರಡ್ಡಿ ವೀರಪ್ಪ ಅತ್ತಿಗೇರಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ ಸಲೀಮ್ ಅಹ್ಮದ್ ಅಜೀಜ ಅಹಮ್ಮದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಾಳೆ ಬುಧವಾರ, ನವೆಂಬರ್ 24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button