ಧಾರವಾಡ

ರಾಜ್ಯ ಸರ್ಕಾರದ ವಿರುದ್ಧ ಧಾರವಾಡದಲ್ಲಿ ರೈತರ ಆಕ್ರೋಶ

ಧಾರವಾಡ

ಧಾರವಾಡದ ತಹಶಿಲ್ದಾರ ಕಚೇರಿ ಎದುರು ರೈತರು‌ ರಾಜ್ಯ ಸರ್ಕಾರದ ವಿರುದ್ಧ ‌ಧಿಕ್ಕಾರ ಕೂಗಿದ್ರು.‌

ರಾಜ್ಯ ಸರ್ಕಾರ ರೈತರಿಗೆ ಮಲತಾಯಿ‌ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‌

ಧಾರವಾಡ ಜಿಲ್ಲಾ ರೈತ ಹಿತರಕ್ಷಣಾ ‌ಸಮಿತಿ ಜಿಲ್ಲಾಧ್ಯಕ್ಷ ಅರವಿಂದ ಏಗನಗೌಡರ್ ‌ನೇತೃತ್ವದಲ್ಲಿ ತಹಶಿಲ್ದಾರ‌ ಕಚೇರಿ‌ ಮುಂದೆ ರೈತರು ಧರಣಿ‌ ನಡೆಸಿದ್ರು.

ಅಕಾಲಿಕ ಮಳೆಯಿಂದ ಬೆಳೆಹಾನಿಯಾದವರಿಗೆ 1 ಲಕ್ಷ ರೂಪಾಯಿ‌ ಪರಿಹಾರ ‌ಹಾಗೂ‌ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ಕೊಡಬೇಕೆಂದು ‌ಒತ್ತಾಯಿಸಿದ್ರು..

ಈ ಸಂದರ್ಭದಲ್ಲಿ ‌ರಾಜು ಕಮತಿ, ಚೀನಿ‌ಬಸು , ಈಶ್ವರ‌ ಶಿವಳ್ಳಿ, ಸಿದ್ದಪ್ಪ‌ ಸಪ್ಪೂರಿ , ಗುಲಾಲ್ ಅಜ್ಜಪ್ಪಾ, ಭೀಮಪ್ಪ‌ಕಾಸಾಯಿ,

ಸೇರಿದಂತೆ ಬಹುತೇಕ ರೈತರು ‌ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button