ಸ್ಥಳೀಯ ಸುದ್ದಿ

ಕಲಘಟಗಿ ಕ್ಷೇತ್ರದಲ್ಲಿ ಬಂಗಾರೇಶ ಹಿರೇಮಠ ಹವಾ

Click to Translate

ಬೆಂಗಳೂರು

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ನಿವಾಸಿಯಾಗಿರುವ ಕಾಂಗ್ರೆಸ್ ಮುಖಂಡ ಬಂಗಾರೇಶ ಎಸ್​.ಹಿರೇಮಠ ಅವರು, ಬಿಕಾಂ ಪದವಿಧರ ಆಗಿದ್ದು, ವ್ಯಾಪಾರ ವಹಿವಾಟು ಮಾಡಿಕೊಂಡು, ಹೆಸರು ಮಾಡಿದ್ದು,
ಇವರು, 2023 ರ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಕ್ಷದ ಅಭ್ಯರ್ಥಿಯಾಗಲು ತಯಾರಿ ನಡೆಸಿದ್ದಾರೆ. 3 ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ
ಬಂಗಾರೇಶ ಹಿರೇಮಠ ಅವರು, ನಾನು ಸಹಿತ ಕಲಘಟಗಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಬಂಗಾರೇಶ ಹಿರೇಮಠ ಅವರ ಮುತ್ತಜ್ಜ ಸಿದ್ದರಾಮಯ್ಯಾ ಮಡಿವಾಳಯ್ಯ ಹುಬ್ಬಳ್ಳಿಮಠ ಇವರ ಕರ್ಮಭೂಮಿಯಲ್ಲಿ 1996 ರಲ್ಲಿ ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷನಾಗಿ, ರಾಜ್ಯ ಹಾಘೂ ಹೊರ ರಾಜ್ಯದ ವಿಧಾನಸಭಾ
ಚುನಾವಣೆಯಲ್ಲಿ ಉಸ್ತುವಾರಿಯಾಗಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದವರು.

ಈಗಾಗಲೇ ಕಲಘಟಗಿ ಮತಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಶುರು ಮಾಡಿರುವ ಬಂಗಾರೇಶ ಹಿರೇಮಠ ಅವರಿಗೆ, ಜನರು ಸ್ವಾಗತ ಕೋರುತ್ತಿದ್ದು, ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಕಲಘಟಗಿ ಮತಕ್ಷೇತ್ರದ ಪ್ರತಿಯೊಂದು
ಹಳ್ಳಿಗಳಲ್ಲಿಯೂ ಬಂಗಾರೇಶ ಹಿರೇಮಠ ಅವರು ನಿತ್ಯವೂ ಪ್ರಚಾರ ಕೆಲಸ ಶುರು ಮಾಡಿದ್ದಾರೆ.

ಸಿದ್ದರಾಮಯ್ಯಾ, ಡಿ.ಕೆಶಿವಕುಮಾರ ಹಾಗೂ ಧಾರವಾಡ ಜಿಲ್ಲೆಯ ಹಿರಿಯ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿರುವ ಬಂಗಾರೇಶ ಹಿರೇಮಠ ಅವರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ
ಆದ ವರ್ಚಸ್ಸು ಹೊಂದಿದ್ದಾರೆ.

2019 ರಿಂದ ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದಾರೆ.
1994 ರಿಂದ 1996 ರವರೆಗೆ ಧಾರವಾಡ ಜಿಲ್ಲಾ ಯುಥ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 1996 ರಿಂದ 2007 ರವರೆಗೆ (ಎನ್​ಎಸ್​ಯುಐ) ಧಾರವಾಡ ಜಿಲ್ಲಾ ಘಟಕದ
ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ವರ್ಕಿಂಗ್​ ಕಮೀಟಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.

2021 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪೆರಾವೂರ ಕ್ಷೇತ್ರದಲ್ಲಿ ವೀಕ್ಷಕರಾಗಿ ಕೆಲಸ ಮಾಡಿದ್ದಾರೆ.
ಸಿಂದಗಿ, ಜಮಖಂಡಿ, ಶಿರಸಿ-ಯಲ್ಲಾಪೂರ, ಶಿರಾ, ಕುಂದಗೋಳ, ಉಪಚುನಾವಣೆಯಲ್ಲಿ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಇದರ ಜೋತೆ ಜೋತೆಗೆ
ಅರಭಾವಿ ಪಟ್ಟಣ ಪಂಚಾಯತ್​ ಚುನಾವಣೆ ಹಾಗೂ ಕಿತ್ತೂರು ಪಟ್ಟಣ ಪಂಚಾಯತ್​ ಚುನಾವಣೆಯಲ್ಲಿ ವೀಕ್ಷಕರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಯುಥ್​ ಕಾಂಗ್ರೆಸ್ ಚುನಾವಣೆಯಲ್ಲಿ ವೀಕ್ಷಕರಾಗಿ ಕೆಲಸ ಮಾಡಿದ್ದಾರೆ.

ಕಲಘಟಗಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಸಂತೋಷ ಲಾಡ್​ ಹಾಗೂ ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ ನಡುವೆ ಚುನಾವಣೆ ಟಿಕೆಟಗಾಗಿ ಪೈಪೋಟಿ ನಡೆದಿದ್ದು, ಬಂಗಾರೇಶ ಹಿರೇಮಠ ಅವರು,
ಕಲಘಟಗಿ 75 ರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಶುರು ಮಾಡಿದ್ದು, ಕೊನೆ ಹಂತದಲ್ಲಿ ಟಿಕೆಟ್​ ಯಾರಿಗೆ ಸಿಗುತ್ತೆ ಎನ್ನುವುದು ಕೂಡ ಇದೀಗ ಕ್ಷೇತ್ರದ ತುಂಬೆಲ್ಲಾ ಕುತೂಹಲ ಮೂಡಿಸಿದೆ.

Related Articles

Leave a Reply

Your email address will not be published. Required fields are marked *

Back to top button